ಭಿನ್ನಪ್ರಾಣವಳಿದು ನಿರ್ಮಳಚಿತ್ತವ ಮಾಡಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಿನ್ನಪ್ರಾಣವಳಿದು ನಿರ್ಮಳಚಿತ್ತವ ಮಾಡಿ ಕಣ್ಣಾಲಿ ಉರೆ ನಟ್ಟು ಹೊರ ಸೂಸದೆ (ಕ)ಣ್ಣ ಬಣ್ಣವ ಕಳೆದು
ಉಣ್ಣನು ಉಣ್ಣದೆ ಇರನು
ತನ್ನ ನಿಲವನರಿತು ತಾನೊಬ್ಬನೆ ಇರನು. ಜನ್ಮ ಮೃತ್ಯುಗಳಲ್ಲಿ ಕಾಳು ಬೆಳುದಿಂಗಳಲ್ಲಿ
ತನ್ನ ಪ್ರಾಣ ತನಗೆ ಪ್ರಕಾಶವು. ತನ್ನೊಳಗೆ ಹೊಣೆ ಹೊಕ್ಕು
ಕುಂಬಳದ ಸೂಚಿಯ ಸುಮ್ಮಾನಿ ಶರಣನ ನಿಲವ ನೋಡಾ ! ಅಳಲಲಿಲ್ಲ ಬಳಲಲಿಲ್ಲ ಅಳಿಯಲಿಲ್ಲ ಉಳಿಯಲಿಲ್ಲ
_ಎರಡಳಿದ ನಿಲವು. ಉಭಯ ಮಧ್ಯದ ಕೊರಡಿಂಗೆ ಕುಂಟಿಯನಿಕ್ಕಿ ಕೆಡಿಸುವನು ತಾನಲ್ಲ. ಹೊರಳಲರಿಯನು ಕೊಳಚಿಯ ಉದಕದೊಳಗೆ. ಕಳಾಕಳಾ ಭೇದದಿಂದ ತೊಳತೊಳಗುವನು. ದಳಭ್ರೂಮಧ್ಯದ ಧ್ರುವಮಂಡಲವ ಮೀರಿ ಕಳೆದು ದಾಂಟಿ ಕೂಡಲಚೆನ್ನಸಂಗಯ್ಯನೊಳಗೆ ಶರಣಕಾಂತಿಯ ನಿಲವಿಂಗೆ ಶರಣು ಶರಣು !