ಭೂಮಿ ನಿನ್ನದಲ್ಲ ಹೇಮ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಭೂಮಿ
ನಿನ್ನದಲ್ಲ
ಹೇಮ
ನಿನ್ನದಲ್ಲ
ಕಾಮಿನಿ
ನಿನ್ನವಳಲ್ಲ_
ಅವು
ಜಗಕ್ಕಿಕ್ಕಿದ
ವಿಧಿ.
ನಿನ್ನ
ಒಡವೆ
ಎಂಬುದು
ಜ್ಞಾನರತ್ನ.
ಅಂತಪ್ಪ
ದಿವ್ಯರತ್ನವ
ಕೆಡಗುಡದೆ
ಆ
ರತ್ನವ
ನೀನು
ಅಲಂಕರಿಸಿದೆಯಾದಡೆ
ನಮ್ಮ
ಗುಹೇಶ್ವರಲಿಂಗದಲ್ಲಿ
ನಿನ್ನಿಂದ
ಬಿಟ್ಟು
ಸಿರಿವಂತರಿಲ್ಲ
ಕಾಣಾ
ಎಲೆ
ಮನವೆ.