ಮಂಡೆ ಬೋಳಾಗಿ ಮೈ ಬತ್ತಲೆಯಾಗಿಪ್ಪವರ ಕಂಡರೆ ನಿರ್ವಾಣಿಗಳೆಂಬೆನೆ? ಎನ್ನೆನಯ್ಯ. ಅಖಂಡಿತವಾಗಿ ಮನ ಬೋಳಾಗಿ ಭಾವ ಬತ್ತಲೆಯಾಗಿರಬಲ್ಲರೆ ಅದು ನಿರ್ವಾಣವೆಂಬೆ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.