ಮಂತ್ರವೆ ಅವಯವಂಗಳಾಗುಳ್ಳ ಪರಶಿವಂಗೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಂತ್ರವೆ ಅವಯವಂಗಳಾಗುಳ್ಳ ಪರಶಿವಂಗೆ
ನಾದವೆ ಕಿರೀಟ
`ಅಕಾರ `ಉ'ಕಾರವೆ ಬಿಂದುವಕ್ತ್ರ
ಪರಶಿವಸ್ವರೂಪವಾದ `ಹ್ರ'ಕಾರವೆ ದೇಹ
`ಹ್ರೀಂ'ಕಾರವೆ ಶಕ್ತಿ
ಹಂಸದ್ವಯಾ ಶೃಂಗವೇ ಭುಜ
`ವ'ಕಾರವೆ_ಕಳಾ ಸ್ವರೂಪವಾದವನಿಯೆ ಪಾದದ್ವಯ. ಇಂತೀ ಮಂತ್ರಮೂರ್ತಿಯಾದ ಪರಶಿವನು
ಮಂತ್ರಾರ್ಥಿಗಳಿಗೆ ಮಂತ್ರಸಿದ್ಧಿಯ ಕೊಡುವದೇವ ನಮ್ಮ ಕೂಡಲಚೆನ್ನಸಂಗಯ್ಯ
ಬೇರಿಲ್ಲ.