ವಿಷಯಕ್ಕೆ ಹೋಗು

ಮಂತ್ರವ ಕಲಿತಡೇನು ?

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಮಂತ್ರವ
ಕಲಿತಡೇನು
?
ಪುರಶ್ಚರಣೆಯ
ಮಾಡಿದಲ್ಲದೆ
ಸಿದ್ಧಿಸದು.
ಮದ್ದನರಿದು
ಫಲವೇನು
?
ಪ್ರಯೋಗಿಸಿಕೊಂಡಲ್ಲದೆ
ಮಾಣದು.
ಲಿಂಗವನರಿದಡೇನು
?
ನೆನೆದಲ್ಲದೆ
ಸಿದ್ಧಿಸದು
ಕಾಣಾ
ಗುಹೇಶ್ವರಾ.