ಮಡಕೆ ದೈವ, ಮೊರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಮಡಕೆ ದೈವ
ಮೊರ ದೈವ
ಬೀದಿಯ ಕಲ್ಲು ದೈವ
ಹಣಿಗೆ ದೈವ
ಬಿಲ್ಲನಾರಿ ದೈವ
ಕಾಣಿರೊ ! ಕೊಳಗ ದೈವ
ಗಿಣ್ಣಿಲು ದೈವ
ಕಾಣಿರೊ ! ದೈವ ದೈವವೆಂದು ಕಾಲಿಡಲಿಂಬಿಲ್ಲ
ದೈವನೊಬ್ಬನೆ ಕೂಡಲಸಂಗಮದೇವ.