ಮಣ್ಣಿಲ್ಲದ ಹಾಳಿನ ಮೇಲೆ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮಣ್ಣಿಲ್ಲದ ಹಾಳಿನ ಮೇಲೆ ಕಣ್ಣಿಲ್ಲದ ಕುರುಡನೊಂದು ರತ್ನವ ಕಂಡ. ಕೈಯಿಲ್ಲದವ ತಕ್ಕೊಂಡ
ಕೊರಳಿಲ್ಲದವ ಧರಿಸಿಕೊಂಡ. ಗಂಡನಿಲ್ಲದ ಬಾಲೆ ಆರು ಮಕ್ಕಳ ಹಡೆದು
ಗುಹೇಶ್ವರನೆಂಬಂತರತೊಟ್ಟಿಲ ಕಟ್ಟಿ
ತಾಯಿಯೆದ್ದು ಆಡುವಾಗ ಮಗನೆದ್ದು ಮೊಲೆಯ ಕೊಡುತಿರ್ದ. ಆದ ಕಂಡು ಬೆರಗಾದ ನಮ್ಮ ಗುಹೇಶ್ವರನು.