ವಿಷಯಕ್ಕೆ ಹೋಗು

ಮತಿಜ್ಞಾನ, ಶ್ರುತಿಜ್ಞಾನ, ಖಂಡಜ್ಞಾನ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಮತಿಜ್ಞಾನ
ಶ್ರುತಿಜ್ಞಾನ
ಖಂಡಜ್ಞಾನ
ಕೇವಲಜ್ಞಾನ
ಜ್ಯೋತಿಜ್ರ್ಞಾನ
ಮಹಾಜ್ಯೋತಿಜ್ರ್ಞಾನವೆಂದಿಂತು ಜ್ಞಾನವಾರು ತೆರನು. ಮತಿಜ್ಞಾನದಿಂದ ಶ್ರುತಿಜ್ಞಾನವಹುದು
ಶ್ರುತಿಜ್ಞಾನದಿಂದ ಖಂಡಜ್ಞಾನವಹುದು. ಖಂಡಜ್ಞಾನದಿಂದ ಕೇವಲಜ್ಞಾನವಹುದು
ಕೇವಲಜ್ಞಾನದಿಂದ ಜ್ಯೋತಿಜ್ರ್ಞಾನವಹುದು. ಜ್ಞೋತಿಜ್ರ್ಞಾನದಿಂದ ಮಹಾಜ್ಯೋತಿಜ್ರ್ಞಾನವಹುದು. ಮತಿಜ್ಞಾನವೆ ಭಕ್ತ
ಶ್ರುತಿಜ್ಞಾನವೆ ಮಹೇಶ್ವರ
ಖಂಡಜ್ಞಾನವೆ ಪ್ರಸಾದಿ
ಕೇವಲಜ್ಞಾನವೆ ಪ್ರಾಣಲಿಂಗಿ
ಜ್ಯೋತಿಜ್ರ್ಞಾನವೆ ಶರಣ
ಮಹಾಜ್ಯೋತಿಜ್ರ್ಞಾನವೆ ಐಕ್ಯ. ಈ ಷಟ್‍ಸ್ಥಲದ ನೆಲೆಯ ಬಲ್ಲಾತನೆ- ಕೂಡಲಚೆನ್ನಸಂಗಯ್ಯನಲ್ಲಿ ಐಕ್ಯನು