ಮತ್ತಂ ಶಿರಸ್ಸಿನ ಮೇಲುಭಾಗದ ಹನ್ನೆರಡಂಗುಲಪ್ರಮಾಣಿನಲ್ಲಿ ರಕ್ತ ಪೀತಾದಿ ಸಕಲವರ್ಣಾಕಾರಮಿಲ್ಲದ ಶುದ್ಧಸಾತ್ವಿಕಮಾದ ಬೆಳಗಿನೊಬ್ಬುಳಿಯನು ಲಕ್ಷಿಪುದೇ ಬಹಿರ್ಲಕ್ಷ್ಯವಯ್ಯಾ ಅಖಂಡೇಶ್ವರಾ.