Library-logo-blue-outline.png
View-refresh.svg
Transclusion_Status_Detection_Tool

ಮತ್ರ್ಯಲೋಕದುದರದೊಳಗೆ ಮೃತ್ಯುದೇವತೆ ಕತ್ತೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಮತ್ರ್ಯಲೋಕದುದರದೊಳಗೆ ಮೃತ್ಯುದೇವತೆ ಕತ್ತೆ ಕುದುರೆಯ ಹಡದು ಪುತ್ರೋತ್ಸಾಹವ ಮಾಡುವದ ಕಂಡು ಸತ್ಯಲೋಕದ ಸತಿಯರು ಬಂದು `ಇದೆತ್ತಳುಚ್ಚಾಹ'ವೆಂದು ಬೆಸಗೊಳಲು ಕತ್ತೆ ಕುದುರೆಗಳು ಸತ್ತು ಮೃತ್ಯುದೇವತೆಯೆತ್ತಹೋದಳೆಂದರಿಯೆ. ಆ ಲೋಕವೆಲ್ಲವೂ ಮುಕ್ತಿಸಾಮ್ರಾಜ್ಯವಾದುದ ಕಂಡು ಇದು ನಿತ್ಯ ನಿಜಲಿಂಗೈಕ್ಯವೆಂದರಿದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.