ಮಧುರಗುಣವ ಇರುವೆ ಬಲ್ಲುದು. ವೇಳೆಯ ಗುಣವ ಕೋಳಿ ಬಲ್ಲುದು. ಗೋತ್ರದ ಗುಣವ ಕಾಗೆ ಬಲ್ಲುದು ಈ ಮನುಷ್ಯ ಜನ್ಮದಲ್ಲಿ ಹುಟ್ಟಿ ಶಿವಜ್ಞಾನಿಗಳ ಬರವನರಯದಿದ್ದಡೆ ಆ ಕೋಳಿ ಕಾಗೆ ಇರುವೆಗಿಂದಲು ಕರಕಷ್ಟ ಕಾಣಾ ಕೂಡಲಚೆನ್ನಸಂಗಮದೇವಾ.