ಮನಕ್ಕೆ ಮನವೇಕಾರ್ಥವಾಗಿ, ಪ್ರಾಣಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನಕ್ಕೆ ಮನವೇಕಾರ್ಥವಾಗಿ
ಪ್ರಾಣಕ್ಕೆ ಪ್ರಾಣವೇಕಾರ್ಥವಾಗಿ
ಭಾವಕ್ಕೆ ಭಾವವೇಕಾರ್ಥವಾಗಿ
ಸಂಗಕ್ಕೆ ಸಂಗ ಸಮರತಿಯಾಗಿ
ಕೂಡಿದ ಕೂಟವನಗಲಬಾರದಯ್ಯ ; ಅಗಲಿ ಒಂದು ನಿಮಿಷ ಸೈರಿಸಬಾರದಯ್ಯಾ. ಕೂಡಲಚೆನ್ನಸಂಗಾ
ನಿಮ್ಮ ನಚ್ಚುಮೆಚ್ಚಿನ ಶರಣರನಗಲುವ ಅಗಲಿಕೆ ಎನ್ನ ಪ್ರಾಣದ ಹೋಕು ನೋಡಯ್ಯಾ.