ಮನಕ್ಕೆ ಮನೋಹರವಲ್ಲದ ಗಂಡರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಮನಕ್ಕೆ ಮನೋಹರವಲ್ಲದ ಗಂಡರು ಮನಕೆ ಬಾರರು
ಕೇಳವ್ವಾ ಕೆಳದೀ
ಪನ್ನಗಭೂಷಣರಲ್ಲದ ಗಂಡರು ಇನ್ನೆನಗಾಗದ ಮೊರೆ
ನೋಡವ್ವಾ. ಕನ್ನೆಯಂದಿನ ಕೂಟ
ಚಿಕ್ಕಂದಿನ ಬಾಳುವೆ
ನಿಮ್ಮಾಣೆಯಯ್ಯಾ
ಕೂಡಲಸಂಗಮದೇವಾ. 503