ವಿಷಯಕ್ಕೆ ಹೋಗು

ಮನದಲ್ಲಿ ಎನ್ನ ಆಸೆ

ವಿಕಿಸೋರ್ಸ್ದಿಂದ


ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಮನದಲ್ಲಿ
ಆಸೆ
ಮೊಳೆದೋರಿ
ಮತ್ತೆ
ಮತ್ತೆ
ಬೇಕೆಂಬಲ್ಲಿ
ಎನ್ನ
ಮನ
ಕಿರಿದಾಯಿತ್ತು.
ನುಡಿಯಲ್ಲಿ
ಉಪಾಧಿಕೆ
ಮೊಳೆದೋರಿ
ಸರ್ವರನು
ಕೊಡು
ಕೊಡು
ಎಂದು
ಬೇಡಿದಲ್ಲಿ
ಎನ್ನ
ನುಡಿ
ಕಿರಿದಾಯಿತ್ತು.
ಲಿಂಗದ
ನೆನಹ
ಜಂಗಮದ
ಸೇವೆಯ-
ತೊರೆದು
ಅಂಗವಿಕಾರಕ್ಕೆ
ಹರಿದಲ್ಲಿ
ಎನ್ನ
ನಡೆ
ಕಿರಿದಾಯಿತ್ತು.
ಇಂತೀ
ತ್ರಿಕರಣಶುದ್ಧವಿಲ್ಲದೆ
ಅಬದ್ಧಪಾಪಿ
ಚಾಂಡಾಲ
ದ್ರೋಹಿಗೆ
ಅಖಂಡೇಶ್ವರನು
ಎಂತೊಲಿವನೊ
ಎನಗೆ?