ಮನ ನೆಲೆಯೊ? ಲಿಂಗದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನ ಲಿಂಗದಲ್ಲಿ ನಿಂದಿತ್ತೆಂಬಲ್ಲಿ ಆ ಮನ ಲಿಂಗಕ್ಕೆ ನೆಲೆಯೊ? ಲಿಂಗ ಮನದ ಸಂಗಿಯೊ? ಎಂಬುದ ತಿಳಿದೆನೆಂಬುದು ಸಂಗವೊ? ನಿಸ್ಸಂಗವೊ? ಬೀಜದೊಳಗಣ ತಿರುಳು ಭೇದಿಸಿ ಪುಟ್ಟುವಲ್ಲಿ ಅದು ತನ್ನಯ ಸುನಾದದಿಂದವೊ? ಅಪ್ಪುವಿನ ಬಿಂದುವಿನ ಭೇದದಿಂದವೊ? ಈ ಉಭಯ ನೆಲೆ ಘಟಿಸಿದಲ್ಲಿ ಯೋಗಕೂಟ. ಆತ್ಮಲಿಂಗದ ಭೇದ
ಮುಕ್ತಿಭೇದ ನಿಂದಲ್ಲಿ ಎನ್ನಯ್ಯ ಚೆನ್ನರಾಮನ ಕೂಟದ ಬೆಳಗು.