ಮನ ಮತವಲ್ಲದೆ, ಸಯದಾನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನ ಮತವಲ್ಲದೆ
ಸಯದಾನ ಮತವಲ್ಲದೆ
ಶರೀರಾರ್ಥದಲ್ಲಿ ದ್ರವ್ಯವಂತನಲ್ಲದೆ
ಅರ್ಪಿತಮುಖವರಿತ ಪ್ರಸಾದಿ
ಸಕೀಲಸುಖವಳಿಯದ ಪ್ರಸಾದಿ
ಶೋಣಿತ ಇಚ್ಛಾದಿಗಳಳಿದ ಪ್ರಸಾದಿ
ನಾದ ಬಿಂದುವಿನ ಪರಿಭಾವವಳಿದ ಪ್ರಸಾದಿ. ಪ್ರಸಾದವೆ ಭಾವ
ಪ್ರಸಾದವೆ ನಿರ್ಭಾವ
ನಡೆ ನುಡಿ ಚೈತನ್ಯ ಆಳಾಪ
ಸಂಗ ಸುಸಂಗ ಮಹಾಸಂಗ ಘನಸಂಗದಲ್ಲಿ ಮನನಿಂದ ಪ್ರಸಾದಿ. ಇದು ಕಾರಣ
ಕೂಡಲಚೆನ್ನಸಂಗಮದೇವಾ ಶಬ್ದಾರ್ಥದಲ್ಲಿ ಮನನಿಂದ ಪ್ರಸಾದಿ.