ಮನ ಲಿಂಗವಾಗಿ ಘನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನ ಲಿಂಗವಾಗಿ ಘನ ವೇದ್ಯವಾದೆನೆಂದು ನುಡಿವವ
ತಾ ಲಿಂಗಪ್ರಸಾದವ ಕೊಂಬಾಗ ಭವಿದೃಷ್ಟಿ ಸೋಂಕಿತ್ತೆಂದು ಬಿಡುವ ಅನಾಚಾರವ ನೋಡಾ! ಆಚಾರವನೆ ಅನಾಚಾರವ ಮಾಡಿ ಅನಾಚಾರವನೆ ಆಚಾರವೆಂದು ಸಂಬಂಧಿಸಿಕೊಂಬ ಪರಿಯ ನೋಡಾ! ಇದು ಕಾರಣ-ಸಂಕಲ್ಪಿತವ ಮಾಡಲಾಗದು. ಸಂಕಲ್ಪಿತದಲ್ಲಿ ಶಿವನಿಲ್ಲ ಪ್ರಸಾದವಿಲ್ಲ. ಲಿಂಗ ಮುಟ್ಟಿ ತಾ ಲಿಂಗವಾದ ಬಳಿಕ ಭವವಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.