ಮರುಳುಂಡ ಮನುಷ್ಯನ ಇರವಿನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮರುಳುಂಡ ಮನುಷ್ಯನ ಇರವಿನ ಪರಿಯಂತೆ
ವಿವರವನರಿಯಬಾರದು ನೋಡಾ
_ಶಿವಜ್ಞಾನ. ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ
ಅದು ಮುಂದುದೋರದು. ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು ! ಗುಹೇಶ್ವರಾ
ನಿಮ್ಮ ನೆರೆ ಅರಿದ ಶರಣರು; ನಿಸ್ಸೀಮಸುಖಿಗಳು ನೋಡಾ.