ವಿಷಯಕ್ಕೆ ಹೋಗು

ಮರ್ಕಟನ ತಲೆಯಲ್ಲಿ ಮಾಣಿಕವಿಪ್ಪುದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಮರ್ಕಟನ ತಲೆಯಲ್ಲಿ ಮಾಣಿಕವಿಪ್ಪುದ ಕಂಡೆನಯ್ಯ. ಆ ಮರ್ಕಟನ ಹಿಡಿದು ಮಾಣಿಕವ ತಕ್ಕೊಳ್ಳಲಾರಳವಲ್ಲ ನೋಡಾ ಆ ಮರ್ಕಟನ ಕೊಂದು ಮಾಣಿಕವ ತಕ್ಕೊಳ್ಳಬಲ್ಲಡೆ ಮುಕ್ಕಣ್ಣ ಶಿವನೆಂದು ಬೇರುಂಟೆ ಹೇಳಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.