ಮಸಿ ಕಪ್ಪಾಯಿತ್ತೆಂದು ಹಾವುಮೆಕ್ಕೆಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಸಿ ಕಪ್ಪಾಯಿತ್ತೆಂದು ಹಾವುಮೆಕ್ಕೆಯ ಹಣ್ಣು ಕಹಿಯಾಯಿತ್ತೆಂದು ತಿಪ್ಪೆಯ ಹಳ್ಳ ಕದಡಿತ್ತೆಂದು ಹಂದಿ ಹುಡು ಹುಡುಗುಟ್ಟಿತ್ತೆಂದು ನಾಯಿ ಬಗುಳಿತ್ತೆಂದು ಸಂದೇಹಿಸಿದವರುಂಟೆ? ಇದು ಕಾರಣ
ಅರಿಯದ ಅಜ್ಞಾನಿಗಳು ನುಡಿದರೆ ಅರುಹಿಂಗೆ ಭ್ರಮೆಯುಂಟೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.