ಮಸ್ತಕದಲ್ಲಿ ಮಹಾದೇವನೆಂಬ ರುದ್ರನಿಪ್ಪನಯ್ಯಾ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಸ್ತಕದಲ್ಲಿ ಮಹಾದೇವನೆಂಬ ರುದ್ರನಿಪ್ಪನಯ್ಯಾ
ನೊಸಲಲ್ಲಿ ಲಕುಲೀಶ್ವರನೆಂಬ ರುದ್ರನಿಪ್ಪನಯ್ಯಾ. ನಾಭಿಯಲ್ಲಿ ಶಂಕರನೆಂಬ ರುದ್ರನಿಪ್ಪನಯ್ಯಾ
ಎದೆಯಲ್ಲಿ ಮಹೇಶ್ವರನೆಂಬ ರುದ್ರನಿಪ್ಪನಯ್ಯಾ. ಕೊರಳಲ್ಲಿ ಲೋಕೇಶ್ವರನೆಂಬ ರುದ್ರನಿಪ್ಪನಯ್ಯಾ. ಬಲದ ಭುಜದಲ್ಲಿ ಶ್ರೀಕÀಠನೆಂಬ ರುದ್ರನಿಪ್ಪನಯ್ಯಾ
ಎಡದ ಭುಜದಲ್ಲಿ ದೇವೇಶನೆಂಬ ರುದ್ರನಿಪ್ಪನಯ್ಯಾ. ಬಲದ ಬಾಹುವಿನಲ್ಲಿಈಶ್ವರನೆಂಬ ರುದ್ರನಿಪ್ಪನಯ್ಯಾ. ಎಡದ ಬಾಹುವಿನಲ್ಲಿ ಶೂಲಪಾಣಿಯೆಂಬ ರುದ್ರನಿಪ್ಪನಯ್ಯಾ. ಬಲದ ಮುಂಗೈಯಲ್ಲಿ ಕೋದಂಡನೆಂಬ ರುದ್ರನಿಪ್ಪನಯ್ಯಾ
ಎಡದ ಮುಂಗೈಯಲ್ಲಿ ಲಿಂಗಕಾಮಿಯೆಂಬ ರುದ್ರನಿಪ್ಪನಯ್ಯಾ. ಬಾಯಲ್ಲಿ ಭವನಾಶನೆಂಬ ರುದ್ರನಿಪ್ಪನಯ್ಯಾ
ನಾಸಿಕದಲ್ಲಿ ನಾಗಭೂಷಣನೆಂಬ ರುದ್ರನಿಪ್ಪನಯ್ಯಾ. ಬಲದ ಕಣ್ಣಲ್ಲಿ ಕಾಮಸಂಹರನೆಂಬ ರುದ್ರನಿಪ್ಪನಯ್ಯಾ
ಎಡದ ಕಣ್ಣಲ್ಲಿ ತ್ರಿಪುರಸಂಹರನೆಂಬ ರುದ್ರನಿಪ್ಪನಯ್ಯಾ. ಬಲದ ಕರ್ಣದಲ್ಲಿ ಪಾರ್ವತೀಪ್ರಿಯನೆಂಬ ರುದ್ರನಿಪ್ಪನಯ್ಯಾ
ಎಡದ ಕರ್ಣದಲ್ಲಿ ಏಕಾದಶನೆಂಬ ರುದ್ರನಿಪ್ಪನಯ್ಯಾ. ಹಿಂದಲೆಯಲ್ಲಿ ಪಂಚಮುಖನೆಂಬ ರುದ್ರನಿಪ್ಪನಯ್ಯಾ. ಬ್ರಹ್ಮರಂಧ್ರದಲ್ಲಿ ಬ್ರಹ್ಮಾಂಡಖಂಡಿತನೆಂಬ ರುದ್ರನಿಪ್ಪನಯ್ಯಾ; ಇಂತೀ ರುದ್ರರುಗಳು ತಮ್ಮ ತಮ್ಮಸ್ಥಾನಂಗಳೊಳಗಿಪ್ಪರಾಗಿ; ಇದನರಿಯದೆ ವಿಭೂತಿಯ ಧರಿಸಿದಡೆ ಕತ್ತೆ ಬೂದಿಯಲ್ಲಿ ಹೊರಳಿದಂತೆ ಕಾಣಾ ಕೂಡಲಚೆನ್ನಸಂಗಮದೇವಾ.