ಮಹಾಂತನ ಗುರುಮಹಾತ್ಮೆ, ಕೂಡಿದ

ವಿಕಿಸೋರ್ಸ್ದಿಂದ



Pages   (key to Page Status)   


ಮಹಾಂತನ ಕೂಡಿದ ದೇವರುಗಳೆಂಬ ಭ್ರಾಂತಿಗುಣದ ಭ್ರಷ್ಟರನೇನೆಂಬೆನಯ್ಯಾ. ಮಹಾಂತೆಂದಡೆ
ಗುರುಮಹಾತ್ಮೆ
ಲಿಂಗಮಹಾತ್ಮೆ
ಜಂಗಮಮಹಾತ್ಮೆ
ಪಾದೋದಕಮಹಾತ್ಮೆ
ಪ್ರಸಾದಮಹಾತ್ಮೆ
ವಿಭೂತಿಮಹಾತ್ಮೆ
ರುದ್ರಾಕ್ಷಿಮಹಾತ್ಮೆ
ಮಂತ್ರಮಹಾತ್ಮೆ
ಎಂಬ ಅಷ್ಟಾವರಣದ ಘನಮಹಾತ್ಮೆಯನರಿದು
ಅಷ್ಟಾವರಣವೆ ಅಂಗವಾಗಿ
ಪಂಚಾಚಾರವೆ ಪ್ರಾಣವಾಗಿ
ಅನಂತ ಸ್ಥಳಕುಳಂಗಳನೊಳಕೊಂಡು ಪರಬ್ರಹ್ಮವ ಕೂಡುವ ಸಮರಸಭಾವ ಸಕೀಲದ ಭೇದವನರಿಯದೆ
ಆಶಾಕ್ಲೇಶಂಗಳಲ್ಲಿ ಕಟ್ಟುವಡೆದು ಕಾಸು ವಿಷಯ ಮಠ ಮನೆಗೆ ಬಡಿದಾಡುವ ಭಾಷೆಭ್ರಷ್ಟರಿಗೆ ಮಹಾಂತಿನ ಘನವಿನ್ನೆಲ್ಲಿಯದೊ ? ಇಂತಪ್ಪ ಮಹಾಂತಿನ ಅರುಹು ಕುರುಹಿನ ಘನವನರಿಯದೆ ನಾನು ಮಹಾಂತಿನ ಕೂಡಿದ ದೇವರೆಂದು ಹೊರಗೆ ಆಡಂಬರ ವೇಷವ ತಾಳಿ ಜಡೆಯ ಬಿಟ್ಟಡೇನು ? ಆಲದ ಮರಕ್ಕೆ ಬೇರಿಳಿದಂತೆ. ಸರ್ವಾಂಗಕ್ಕೆ ಭಸ್ಮವ ಹೂಸಿದಡೇನು ? ಚಪ್ಪರದ ಮೇಲೆ ಕಗ್ಗುಂಬಳಕಾಯಿ ಬಿದ್ದಂತೆ. ಸ್ಥಾನ ಸ್ಥಾನಕ್ಕೆ ರುದ್ರಾಕ್ಷಿಯನಲಂಕರಿಸಿದಡೇನು ? ಹೇರಂಡಲಗಿಡ ಗೊನೆಯ ಬಿಟ್ಟಂತೆ ಕಾಣಾ ಅಖಂಡೇಶ್ವರಾ.