ವಿಷಯಕ್ಕೆ ಹೋಗು

ಮಹಾಜ್ಞಾನವು ಗುರುವಿನಲ್ಲಿ ಸಾಹಿತ್ಯ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮಹಾಜ್ಞಾನವು ಗುರುವಿನಲ್ಲಿ ಸಾಹಿತ್ಯ ಸುಜ್ಞಾನವು ಶಿಷ್ಯನಲ್ಲಿ ಸಾಹಿತ್ಯ
ಜ್ಞಾನವು ಲಿಂಗದಲ್ಲಿ ಸಾಹಿತ್ಯ. ಇಂತೀ ಜ್ಞಾನವೂ ಸುಜ್ಞಾನವೂ ಮಹಾಜ್ಞಾನವೂ ಜಂಗಮದಲ್ಲಿ ಸಾಹಿತ್ಯವು. ಇದು ಕಾರಣವಾಗಿ- ಸಕಲ ಭೋಗಾಧಿಭೋಗಂಗಳೆಲ್ಲವನು ಜಂಗಮಕ್ಕೆ ಕೊಡದೆ ಲಿಂಗಕ್ಕೆ ಕೊಡಲಾಗದು ಅದೇನು ಕಾರಣವೆಂದರೆ: ಸರ್ವಸುಖಂಗಳನು ಜಂಗಮಕ್ಕೆ ಅರ್ಪಿಸಿದಡೆ ಆ ಸುಖವ ಸುಖಿಸಬಲ್ಲನಾಗಿ ತನಗೆ ಪ್ರಸಾದವಾಯಿತ್ತು. ಲಿಂಗಕ್ಕೆ ಅರ್ಪಿಸಿದಡೆ ಆ ಸುಖವ ಸುಖಿಸಲರಿಯದಾಗಿ ತನಗೆ ಪ್ರಸಾದವಿಲ್ಲ
ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಅದು ಕಾರಣವಾಗಿ- ಜಂಗಮಕ್ಕೆ ಮಾಡದೆ ಲಿಂಗಕ್ಕೆ ಆರು ಮಾಡಿಹಾರು ಅಲ್ಲಿ ಲಿಂಗಕ್ಕೆ ತೃಪ್ತಿಯಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.