ಮಹೀಪತಿದಾಸರು

ವಿಕಿಸೋರ್ಸ್ ಇಂದ
Jump to navigation Jump to search

ಭಾಸ್ಕರ ಗುರುವರ ಮಗುಟ

ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ | ಭಾಸ್ಕರಗುರು ದಯನೋಟ ರಸಕಾಯ ಸವಿದುಂಬೂಟ ||

ಭಾಸ್ಕರಗುರು ನಿಜದಯ ಲೇಸುದೋರುವ ವಿಜಯ | ಭಾಸ್ಕರಗುರು ಅಭಯ ಹಸನಾದ ಪುಣ್ಯೋದಯ ||೧||

ಭಾಸ್ಕರ ಕರುಣಾ ಕಟಾಕ್ಷ ಭಾಸುದು ಘನ ಪ್ರತ್ಯಕ್ಷ | ಭಾಸ್ಕರಗುರು ನಿಜಭಿಕ್ಷ ಹಸನಾಗಿ ಮಾಡುವಾ ಸಂರಕ್ಷ ||೨||

ಭಾಸ್ಕರಗುರು ನಿಜಬೋಧ ಭಾಸುವ ಘನಸರ್ವದಾ | ಭಾಸ್ಕರಗುರು ಪ್ರಸಾದ ಸ್ವಸುಖದೋರುವ ಸಂವಿಸ್ತಾದ ||೩||

ಭಾಸ್ಕರಗುರು ಉಪದೇಶ ಭಾಸುವ ಬಲು ಸಂತೋಷ | ಭಾಸ್ಕರಗುರುವರೇಶ ಈಶನಹುದೊ ಸರ್ವೇಶ ||೪||

ಭಾಸ್ಕರಗುರು ಕೃಪೆ ಜ್ಞಾನ ಲೇಸಾಗಿ ತೋರುವದುನ್ಮನ | ಭಾಸ್ಕರಗುರು ದಯ ಕರುಣ ದಾಸಮಹಿಪತಿಗಾಭರಣ ||೫||