ಮಾಡಬಾರದ ಭಕ್ತಿಯನೆ ಮಾಡಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಾಡಬಾರದ ಭಕ್ತಿಯನೆ ಮಾಡಿ
ನೋಡಬಾರದ ನೋಟವನೆ ಕೂಡಿ
ಸ್ತುತಿಸುವರೆ ಸ್ತುತಿಗೆ ಬಾರದೆ
ಮುಟ್ಟುವ[ರೆ] ಮುಟ್ಟಬಾರದೆ ಬಟ್ಟಬಯಲಾಗಿ ಹೋದ ಮರುಳುಶಂಕರದೇವರ ಮಹಾತ್ಮೆಗೆ ನಮೋ ನಮೋ ಎಂದು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ