ಮಾತಿನಲ್ಲಿ ಶರಣರೆ ಶುದ್ಧವಿಲ್ಲದವರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಾತಿನಲ್ಲಿ ಶುದ್ಧವಿಲ್ಲದವರು ಶರಣರೆ ? ಮನದಲ್ಲಿ ನಿಜವಿಲ್ಲದವರು ಶರಣರೆ ? ಇಂದ್ರಿಯಂಗಳಿಗೆ ಮೈಗೊಡುವವರು ಶರಣರೆ ? ವಿಷಯಕ್ಕೆ ಮುಂದುವರಿವವರು ಶರಣರೆ ? ಅಲ್ಲಲ್ಲ
ಹಿಂದಣ ಮರವೆ ಮುಂದಣ ಎಚ್ಚರಿಕೆಯನರಿತು ಜಾಗ್ರ ಸ್ವಪ್ನ ಸುಷುಪ್ತಿಯ ಹರಿದು
ನಿರಾಳಲಿಂಗದಲ್ಲಿ ನಿಂದಾತ ಶರಣನಲ್ಲದೆ
ಬಣ್ಣಗಾರ ಬಾಯಬಡುಕ ಭವದುಃಖಿಗಳ ಶರಣರೆಂದಡೆ ನಗುವರಯ್ಯಾ ನಿಮ್ಮ ಶರಣರು ಅಖಂಡೇಶ್ವರಾ.