ಮಾರುತನ ಮುಖದ ಮಾನಿನಿ ಆರುಮಂದಿಯ ಹಡೆದಳು ನೋಡಾ. ಅವರು ಮೂರುಲೋಕವ ಕೊಲುವ ವೈರಿಗಳು. ಅವರ ಜಯಿಸುವವರಾರನೂ ಕಾಣೆ! ಅರಿಗಳಾರನು ಕೊಂದಾತ ತ್ರಿಜದೊಡೆಯನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.