ವಿಷಯಕ್ಕೆ ಹೋಗು

ಮಿತ್ರ ದುಖಃ/ii

ವಿಕಿಸೋರ್ಸ್ದಿಂದ

ದ ನಾನು ಸದಾ ಮ್ಯಾನವಾಗಿಯೇ ಕಾಣುತ್ತೇನೆ. ವಸ್ತು ಸ್ಥಿತಿ ಯು ಹೀಗಿರುವದು. ಆದರೆ ಮಿತ್ರಾ, ಇದರ ನಿವಾರಣವು ಯಾರಿಂದಾಗುವಂತಿದೆ ? ಎಂದು ನುಡಿದು, ಅತ್ಯಂತ ದುಃಖದಿಂದಲೂ ನಿರಾಶೆಯಿಂದಲೂ ಉಸರ್ಗರೆಯುತ್ತ ಸೂ ರ್ಯನು ಕೆಲಹೊತ್ತಿನ ವರೆಗೆ ಸುಮ್ಮನೆ ಕುಳಿತು ಬಿಟ್ಟನು.

ii

ಆದರೆ ಹಲವು ದಿನಗಳಿಂದ ಅವನ ಮನಸ್ಸಿನಲ್ಲಿ ಸಂಚಿತ ವಾದ ದುಃಖವು ಅವನನ್ನು ಬಹಳ ಹೊತ್ತಿನ ವರೆಗೆ ಸುಮ್ಮನಿ ರಗೊಡಲಿಲ್ಲ. ಆ ದುಃಖವು ಆವೇಶದಿಂದ ಹೊರಗೆ ಬರಲು ಪ್ರಯತ್ನ ಮಾಡಹತ್ತಿತು; ಅವನ ಶೋಕವು ಒತ್ತರಿಸಿತು; ಕಂಠವು ಬಿಗಿಯಿತು; ಹಾಗು ಕಣ್ಣುಗಳು ಅಶ್ರುಗಳಿಂದ ತುಂ ಬಿದಂತಾದವು. ಆಗ ಸೂರ್ಯನು ಕಣ್ಣುಗಳನ್ನು ಇರಿಸಿಕೊ ಳ್ಳುತ್ತ ಚಂದ್ರನೊಡನೆ ಹೀಗೆ ಮಾತಾಡತೊಡಗಿದನು:-

"ಚಂದ್ರಾ, ನನ್ನ ಮ್ಯಾನತೆಗೆ ಇನ್ನೂ ಒಂದು ಕಾರ ಣವಿರುವದು. ಮಿತ್ರಾ, ನೀನು ಪರಮ ಧನ್ಯನು, ತಿಂಗಳೊಳಗೆ ಸರಾಸರಿ ಹದಿನೈದು ದಿವಸ ನೀನು ಪ್ರಕಾಶಮಾನನಾಗುತ್ತೋ; ಹಾಗು ಉಳಿದ ಹದಿನೈದು ದಿವಸಗಳಲ್ಲಿ ಬೇಕಾದ ಹಾಗೆ ನಿನಗೆ ವಿಶ್ರಾಂತಿಯನ್ನು ಪಡೆಯಲಿಕ್ಕೆ ಅನುಕೂಲವಿರುತ್ತದೆ; ಆದರೆ ನನ್ನ ಸ್ಥಿತಿಯು ಇದಕ್ಕೆ ವಿಪರೀತವಿದೆ. ನನ್ನ ಇಷ್ಟು ದುಃಖ ಕ್ಯ, ಶೋಕಕ್ಕೂ ಕಾರಣವೇನಂದರೆ, ಒಬ್ಬ ಸಾಧಾರಣ ಮನುಷ್ಯನಿಗೆ ಯಾವದೊಂದು ರಾತ್ರಿಯಲ್ಲಿ ನಿಯಮಿತ ವೇಳೆ ಗಿಂತ ಹೆಚ್ಚು ಹೊತ್ತಿನ ವರೆಗೆ ನಿದ್ದೆಯು ಹತ್ತದಿದ್ದರೆ, ಮತ್ತು ಅವನಿಗೆ ಸಾಕಷ್ಟು ವಿಶ್ರಾಂತಿಯು ದೊರೆಯದಿದ್ದರೆ, ಮರು ದಿವಸವೇ ಅವನು ಎಷ್ಟು ಮ್ಲಾನವಾಗಿ ತೋರುತ್ತಿರುತ್ತಾನೆ?
ಹಾಗು ಮರುದಿನ ರಾತ್ರಿ ಅವನಿಗೆ ಬೇಗ ನಿದ್ದೆ ಹತ್ತಿ ವಿಶ್ರಾಂ ತಿ ದೊರೆಯುವ ಕುರಿತು, ಎಷ್ಟೋ ಉಪಾಯಗಳು ಯೋಜಿ ಸಲ್ಪಡುತ್ತವೆ. ಅವನ ಹೆಂಡಿರು-ಮಕ್ಕಳು ಅವನ ತಲೆಯಮೇ ಲೂ, ಕಣ್ಣ ಮೇಲೂ ಪಡ್ಡಗಳನ್ನು ಹಾಕುವರು; ವೈದ್ಯರು' ಮಾತ್ರೆ-ಗುಳಿಗೆಗಳನ್ನು ಕೊಡುತ್ತಾರೆ; ಡಾಕ್ಟರರು ಹಲವು ಔಷಧಗಳನ್ನು ಕೊಡುತ್ತಾರೆ; ಆದರೆ ಗೆಳೆಯಾ, ಆ ಯಕಃಶ್ಚಿತ ಮನುಷ್ಯನ ಪ್ರಕೃತಿಯು ಸುಧಾರಿಸುವ ಬಗ್ಗೆ ಅಷ್ಟೊಂದು ಉಪ ಚಾರಗಳು ನಡೆದಿರಲು, ನಿನ್ನ ಈ ಭಗವಾನ್' ಸೂರ್ಯನಕಡೆಗೆ, ಅವನ ಪ್ರಕೃತಿ ಮಾನದ ಕಡೆಗೆ, ಮತ್ತು ಅವನ ಮ್ಯಾನತೆಯ ವಿಷಯಕ್ಕೆ ಯಾರೂ ಹಣಿಕಿಸಹ ಹಾಕುವದಿಲ್ಲವಲ್ಲ! ಚಂದ್ರಾ, ಎಷ್ಟು ದಿವಸಗಳಿಂದ ನನಗೆ ನಿದ್ದೆಯಿಲ್ಲೆಂಬದರ ಕಲ್ಪನೆಯ ದರೂ ನಿನಗದೆಯೇನು? ನಾನು ನನ್ನ ಈ ದುಃಖವನ್ನು ಯಾರಿಗೆ ಹೇಳಬೇಕು? ಮತ್ತು ಒಂದು ವೇಳೆ ನಾನು ಅದನ್ನು ಹೇಳಹ ತಿದರೂ ಅದು ತಮಗೆ ಕೇಳಬರುವಷ್ಟು ನನ್ನ ಹತ್ತರಕ್ಕೆ ಬಂದು ತುಸು ಹೊತ್ತು ಸಮಾಧಾನದಿಂದ ನಿಂತು ಕೇಳಿಕೊ ಳ್ಳುವವರಾದರೂ ಯಾರಿದ್ದಾರೆ? ಚಂದ್ರಾ, ಹೇಳಿದರೆ ನಿನಗೆ ಸುಳ್ಳೆನಿಸೀತು;ಆದರೆನನ್ನ ಜನ್ಮಾರಭ್ಯ ನಿದ್ದೆಯು ಹೇಗಿರುತ್ತದೆ ಬದು ನನಗೆ ಗೊತ್ತಿರುವದಿಲ್ಲ. ಮನುಷ್ಯನ ಕಣ್ಣಿನ ರೆಪ್ಪೆಗಳಲ್ಲಿ ಮೇಲಿನ ರೆಪ್ಪೆಯು ಕೆಳಗಿನ ರೆಪ್ಪೆಯನ್ನು ಆಗಾಗ್ಗೆ ಬಡಿಯು ತಿರುತ್ತದೆ. ಆದರೆ ನಾನು ಇಡೀ ಜಗತ್ತಿನಲ್ಲಿ ಸಂಚಾರ ಮಾ ಡುವವನಿದ್ದು, ನನ್ನ ರೆಪ್ಪೆಗಳನ್ನು ಕೂಡ ಅಲ್ಲಾಡಿಸುವ ಸಾ ಮರ್ಥವು ನನಗಿಲ್ಲೆಂಬದು ಎಂಥ ಖೇದದ ಸಂಗತಿಯು! ಮನು ಷ್ಯನ ಎರಡೇ ಕಣ್ಣುಗಳ ಮಾನದಿಂದ ನನಗೆ ಹನ್ನೆರಡು ಅಕ್ಷ್ಮಿ ಗಳು ಲಭಿಸಿದಾಗ, ನಾನು ಎಷ್ಟೋ ಪಟ್ಟು ಆನಂದತಾಳಿ ದ್ದೆನು. ಮನುಷ್ಯನ ಆರು ಪಟ್ಟು ಹೆಚ್ಚು ವಿಶ್ರಾಂತಿಯನ್ನು
ಪಡಕೊಳ್ಳುವ ಅಧಿಕಾರವು ನನಗೆ ಪ್ರಾಪ್ತವಾಯಿತೆಂದು ಅಗ ನಾನು ಭಾವಿಸಿದ್ದೆನು. ಆದರೆ ಆ ನನ್ನ ಹನ್ನೆರಡು ಕಣ್ಣಗೆ ಟೊಳಗಿನ ಒಂದು ಕಣ್ಣಿನ ರೆಪ್ಪೆಯನ್ನು ಸಹ ಮುಚ್ಚುವದು ಶಕ್ಯವಿಲ್ಲೆಂಬದು ನನಗೆ ತಿಳಿದು ಬಂದ ಮೇಲೆ, ನನ್ನಂಥ ಹತ ಭಾಗ್ಯ ಪ್ರಾಣಿಯು ಅನ್ವರಾರೂ ಇಲ್ಲೆಂಬದು ನನ್ನ ಮನವು ಕೆಯಾಯಿತು; ಮತ್ತು ಅಂದಿನಿಂದ ನನ್ನ ಮನಸ್ಸಿನಲ್ಲುಂಟಾದ ಚಡಪಡಿಕೆಯ ಕಲ್ಪನೆಯು ಸಹ ಪರರಿಗಾಗುವದು ಶಕ ವಿಲ್ಲ.”

ಚಂದ್ರಾ, ದಿನಾಲು ಇಷ್ಟು ದೊಡ್ಡ ರಾತ್ರಿಯು ಆಗು ತಿದ್ದು, ಆ ರಾತ್ರಿಯಲ್ಲಿ ನಾನು ಬೇಕಾದಷ್ಟು ಹೊತ್ತಿನ ವರೆಗೆ ಮಲಗಿಕೊಳ್ಳಬಹುದೆಂದು ಯಾವನೊಬ್ಬ ತಿಳಿಗೇಡಿ ಮನುಷ್ಯನು ಕೇಳಬಹುದು; ಆದರೆ ಮಿತ್ರಾ, ನನ್ನ ಪಾಲಿಗೆ ರಾತ್ರಿಯೇ ಇಲ್ಲೆಂಬದು ನಿನಗೆ ಗೊತ್ತಿದ್ದ ಸಂಗತಿಯಾಗಿದೆ. ರಾತ್ರಿಗಳು ಎರಡನೆಯವರ ಸಲುವಾಗಿ ಆಗುತ್ತವೆ; ನನ್ನ ಸಲುವಾಗಿ ಒಂದು ರಾತ್ರಿಯು ಕೂಡ ಉಂಟಾಗುವದಿಲ್ಲ. ನಾನು ಎಲ್ಲ ಜನರ ಹಿತಕ್ಕಾಗಿಯೇ, ವಿಶ್ರಾಂತಿಗಾಗಿಯೂ, ಒಂದರ ಹಿಂದೊಂದರಂತೆ ಹಗಲು-ರಾತ್ರಿಗಳನ್ನುಂಟು ಮಾಡುತ್ತೇನೆ; ಆದರೆ ನನಗೋಸುಗ ಯಾರೂ ಎಂದೂ ಒಂದು ರಾತ್ರಿಯನ್ನು ಸಹ ನಿರ್ಮಿಸುವದಿಲ್ಲ. ಬೇರೆಯವರೆಲ್ಲರೂ ಹಗಲಲ್ಲಿಯೂ, ಇರು ಟಿನಲ್ಲಿಯ ಬೇಕಾದ ಹಾಗೆವಿಶ್ರಾಂತಿಯನ್ನು ಪಡೆಯುತ್ತಾರೆ; ಮತ್ತು ಮರುದಿನ ಪನಃ ದುಡಿಯಲಿಕ್ಕೆ ಸಿದ್ಧವಾಗುತ್ತಾರೆ. ಆದರೆ ನನಗೆ ಹಗಲು, ಹಾಗು ರಾತ್ರಿ ಇವು ಒಂದೇಸಮವಾಗಿವೆ. ಅದ ರಿಂದ ವಿಶ್ರಾಂತಿಯನ್ನು ಹೊಂದದೆಯೇ, ನಾನು ಎರಡನೇ ದಿನ ಸದ ಕೆಲಸವನ್ನು ಪುನಃ ಆರಂಭಿಸಬೇಕಾಗುತ್ತದೆ. ರಾತ್ರಿಯ ನಿದ್ದೆಯ, ಹಾಗು ವಿಶ್ರಾಂತಿಯ ಮಾತು ಒತ್ತಟ್ಟಿಗಿರಲಿ,ಕ್ಷಣ ಹೊತ್ತು ಎಲ್ಲಿಯಾದರೂ ಒಟ್ಟಿಗೆ ನಿಲ್ಲಲಿಕ್ಕೆ, ಅಥವಾ ಮ
ತೊಟ್ಟಿಗೆ ಸ್ವಲ್ಪ ಕುಳಿತು ವಿಶ್ರಾಂತಿಯನ್ನು ತಕ್ಕೊಳ್ಳಲಿಕ್ಕೆ ಕೂಡ ನನಗೆ ಅವಕಾಶವಿರುವದಿಲ್ಲ. ಪ್ರವಾಸಿಗರು, ನಾಲ್ಕೆಂ ಟು ಹರದಾರಿ ನಡೆದ ಬಳಿಕ ಯಾವದೊಂದು ಬಾವಿಯ ದಂಡೆ ಯಲ್ಲಿ, ಅಥವಾ ನದಿಯ ತೀರದಲ್ಲಿ ಕೆಲಹೊತ್ತು ಕುಳಿತು ವಿಶ್ರಾಂತಿಯನ್ನು ತಕ್ಕೊಳ್ಳುವರು; - ಆನಂತರ ಅವರು ಮತ್ತೆ ಮುಂದಿನ ಹಾದಿಗೆ ಹತ್ತು ವರು. ಆದರೆ ಈ ನಿನ್ನ ದುರ್ದೆ. ವಿಯಾದ ಪ್ರವಾಸಿಗನು ನಡುವೆ ಎಲ್ಲಿಯೂ ಒಂದು ಕ್ಷಣ ಸಹ ನಿಲ್ಲದೆ ಒಂದೇಸವನೆ ಸಾವಿರಾರು ಹರದಾರಿಗಳ ದಾರಿ ಯನ್ನು ಕ್ರಮಿಸುತ್ತಿರಬೇಕಾಗುತ್ತದೆ! ಒಂದು ವೇಳೆ ನಾನು ದಾರಿಯಲ್ಲಿ ಎಲ್ಲಿಯಾದರೂ ತುಸು ಹೊತ್ತು ತಡೆದರೆ ವಿಶ್ರಾಂತಿ ಯ ಸ್ಥಳವಾದರೂನನ್ನ ಮಾರ್ಗದಲ್ಲಿ ಸಿಗುತ್ತದೆ? ಚಂದ್ರಾ, ಈ ನಮ್ಮ ಕೆಳಗಿನ ಭೂಮಂಡಲದ ಮೇಲೆ ಪ್ರವಾಸಿಗರಿಗೆ ಒಂದೇಸವನೆ ಬಿಸಿಲು ಹತ್ತಬಾರದೆಂದೂ, ಅವರಿಗೆ ವಿಶ್ರಾಂ ತಿಗೆ ಅನುಕೂಲವಾಗುವಂಥ ಸ್ಥಳವಿರಬೇಕೆಂದೂ ಎಷ್ಟೋ ಜನ ಪುಣ್ಯಾತ್ಮರು ರಹದಾರಿಗಳ ಎಡಬಲಗಳಲ್ಲಿ ವಿಶಾಲವಾದ ಮರಗಳನ್ನು ಬೆಳಿಸಿ ಆ ನೆಳಲಿನಿಂದಲೂ, ನಾಲ್ಕೆಂಟು ಹರದಾ ರಿಗಳ ಅಂತರದಿಂದ ಚಿಕ್ಕ ದೊಡ್ಡ ಕೆರೆಬಾವಿಗಳನ್ನು ಕಟ್ಟಿಸಿ ನೀರಿನ ಅನುಕೂಲತೆಯಿಂದಲೂ ಸಂತುಷ್ಟಿಯನ್ನುಂಟು ಮಾಡಿ ರುತ್ತಾರೆ. ಆದರೆ ನಿನ್ನ ಮಿತ್ರನು ಅಖಂಡ ಪ್ರವಾಸಿಗನಾಗಿ ದಾರೀ ಕ್ರಮಿಸಹತ್ತಿದಂದಿನಿಂದ ಇದು ವರೆಗೂ ಅವನಿಗೆ ದಾ ರಿಯಲ್ಲಿ ಬಿಸಿಲು ಹತ್ತಬಾರದೆಂದು ಗಿಡಬೆಳಿಸುವ, ಹಾಗು ತೃ ಪಾಶಮನಾರ್ಥವಾಗಿ ಕೆರೆಬಾವಿಗಳನ್ನು ತೊಡಿಸುವ ಪುಣ್ಯ ವಂತನಾದ ಒಬ್ಬ ಪರೋಪಕಾರಿಯ ಜನ್ಮವೆತ್ತಲಿಲ್ಲ. ಗೆಳೆಯಾ, ನನ್ನ ಪ್ರವಾಸದ ದಾರಿಯು ಮಿತಿಮೀರಿದ ಬೆಳಕಿನಿಂದ ಪ್ರಕಾ ಶಿಸುವಂಥದೂ, ಆತಿಶಯವಾದ ಬಿಸಿಲಿನಿಂದ ಕಾದು ಉರಿಯು
ವಂಥದೂ ಇರುವದರಿಂದ ಅಲ್ಲಿ ಎಂಥ ದಟ್ಟ, ಹಾಗು ದೊಡ್ಡ ಮರಗಳಿದ್ದರೂ ಅವು ಕಮರಿ, ಇಲ್ಲವೆ ಸುಟ್ಟು ಹೋಗತಕ್ಕವೇ. ಅಂಥಲ್ಲಿ ಹೊಸಗಿಡಗಳನ್ನು ಹಚ್ಚುವವರಾದರೂಯಾರು? ಮತ್ತು ಯಾವನಾದರೂ ಹಚ್ಚ ಹೋದರೆ, ಅವು ಅಲ್ಲಿ ನಾಟುವ ಬಗೆ ಯಾದರೂ ಹೇಗೆ? ಚಂದ್ರಾ, ನಿನ್ನ ಮಿತ್ರನ ಅನಿಷ್ಟ ಕಾಲು ಗುಣದ ಯೋಗದಿಂದ ಅವನು ಯಾವ ಯಾವ ದಾರಿಯಿಂದ ಹೋಗುವನೋ, ಆ ದಾರಿಯ ಎಡಬಲಗಳಲ್ಲಿ ಒಂದು ಹನಿ ನೀರು ಸಹ ಉಳಿಯಲಾರದು. ನಾನು ಸದಾ ಮಹಾಸಾಗರದ ನೀರನ್ನು ಶೋಷಿಸುತ್ತಿರುತ್ತೇನೆ; ನನ್ನ ಶೋಷಣದಿಂದ ದೊಡ್ಡ ಹೊಳೆಗಳ ಬತ್ತಿ ಬಯಲಾಗುವವು. ಇಂಥ ಅಪಾತ ದಾ ಕಾರನ ದಾರಿಯಲ್ಲಿ ಅದಾವನು ಕೆರೆಬಾವಿಗಳನ್ನು ತೋಡತೊ ಡಗುವನು? ಹಾಗು ಅವು ಅಲ್ಲಿ ಉಳಿಯುವ ಬಗೆಯಾದರೂ ಹೇಗೆ? ಮಿತ್ರಾ, ನನಗೆ ಅದಾವ ಅನುಕೂಲತೆಯ ಆಗುವ ಸಂಭವವಿಲ್ಲ; ಆದ್ದರಿಂದ ನಾನು ಬಿಸಿಲು-ಬಾಯಾಂಕಗಳನ್ನು ಲೆಕ್ಕಿಸದೆ ಒಂದೇಸವನೆ ದಾರೀಕ್ರಮಿಸುತ್ತಿರಬೇಕಾಗುತ್ತದೆ.

ನನ್ನ ಬಿಸಿಲ ತಾಪವು ತಮಗೆ ಆಗಬಾರದೆಂದು ಆ ಬಿಸಿಲ ನಿವಾರಣಾರ್ಥವಾಗಿ ತಮ್ಮ ತಲೆಯ ಮೇಲೆ ಕೊಡಿಯನ್ನು ಹಿಡಿ ದುಕೊಳ್ಳುವ ಒಂದು ಹೊಸಯುಕ್ತಿಯನ್ನು ಮನುಷ್ಯರು ಕಂಡು ಹಿಡಿದಿರುವರು! ಮಿತ್ರಾ, ಅವರ ಬುದ್ದಿಶಾಲಿತ್ಯವನ್ನು ಕಂಡು ನನಗೆ ಕ್ಷಣ ಹೊತ್ತು ಪರಮ ಸಂತೋಷವೆನಿಸುತ್ತದೆ. ರಾಜಮಹಾರಾಜರಂತೂ ಛತ್ರವನ್ನು ಹಿಡಿಯುವ ತೊಂದರೆಯು ಕಂಡ ತಮಗಾಗಬಾರದೆಂದು ಆ ಕೆಲಸಕ್ಕಾಗಿ ಬೇರೊಬ್ಬನನ್ನು ನಿಯೋಜಿಸಿ ಸುಖಬಡುತ್ತಾರೆ!! ನಾನೂ ಅವರ ಆ ಯುಕ್ತಿ ಯ ಲಾಭವನ್ನು ಮಾಡಿಕೊಳ್ಳುವ ಸಲುವಾಗಿ ನನಗೋಸ್ಕರ ಒಂದು ಸುದೀರ್ಘವಾದ ಛತ್ರವನ್ನು ಮಾಡಿಸಿದನು; ಹಾಗು
ಅದನ್ನು ಹಿಡಿಯುವ ಸಲುವಾಗಿ ಒಂದು ಸಂಬಳದ ಆಳನ್ನು ಸಹ ಗೊತ್ತು ಮಾಡಿದೆನು. ಆದರೆ ಮಿತ್ರಾ, ನನಗೆ ಶೀತಲತೆಯ ಸ್ಪರ್ಶವು ಕೂಡ ಆಜನ್ಮದಲ್ಲಾಗುವ ಯೋಗವಿಲ್ಲದ್ದರಿಂದ ಆ ಚಾಕರನಾದರೂ ನನಗೆ ಹೇಗೆ ಲಭಿಸಿಯಾನು? ಅವನು ಆ ಛತ್ರವನ್ನು ತಕ್ಕೊಂಡು ನನ್ನ ಸಮೀಪಕ್ಕೆ ಬರುತ್ತಿದ ಕೂಡ ಲೆ ಮೊದಲು ಆ ಛತ್ರವು ಸುಟ್ಟು ಬೂದಿಯಾಯಿತು; ಕ್ಷಣಾರ್ಧದಲ್ಲಿ ಅವನೂ ಸುಟ್ಟ ಬದನೇಕಾಯಂತಾಗಿ ಸತ್ತು ಹೋದನು.

“ಪರದುಃಖವು ಶೀತಲವಿರುತ್ತದೆ ೦ದು ಮಾನವರಲ್ಲಿ
ಒಂದು ನಾಣ್ಣುಡಿಯದೆ; ಆದರೆ ಛತ್ರ ಅಡಿಯುವ ಆ ಮನು ಷ್ಯನು ಸತ್ತದ್ದದರಿಂದ ಜಾಗೃತವಾದ ಈ ನಿನ್ನ ಮಿತ್ರ-ಸೂರ ನ ದುಃಖವು ಅವನಿಗೆ ಶೀತಲವಾಗಿ ತೋರಲಿಲ್ಲ. ಇಷ್ಟೇ ಅಲ್ಲ, ಆದರೆ ಪಾಪ! ಆ ಬಡವನ ಮರಣದಿಂದ ಈ ಸೂರ್ಯನಿಗೆ ಹೆಚ್ಚಾದ ಸಂತಾಪವಾಯಿತು.

ಈ ಪ್ರಕಾರದ ದುಃಖಾತಿರೇಕದ ಸ್ಮರಣದಿಂದ ಎಲ್ಲರಿ

ಗೂ ಸ್ವಾಭಾವಿಕವಾಗಿ ಉಂಟಾಗುವಂತೆ ಸೂರ್ಯನಿಗೂ ಒಂದು ತರದ ಬೆವರೂ ನಡುಗ ಹುಟ್ಟಿದವು; ಹಾಗು ಅವನ ಕಣ್ಣುಗಳಲ್ಲಿ ದುಃಖಾಶ್ರುಗಳು ಸಂಚರಿಸತೊಡಗಿದವು. ಆದರೆ ಸೂರ್ಯನ ಅತ್ಯುಷ್ಣ ಪ್ರಕೃತಿಯ ಮೂಲಕ ಆ ಬೆವರ ಹನಿಗಳೂ ಕಣ್ಣೀರುಗಳೂ ಅವನ ದೇಹದಿಂದ ಉದುರಿ ನೆಲಕ್ಕೆ ಬೀಳಲಿಲ್ಲ. ಅವು ಅಲ್ಲಿಂದಲೇ ಅಡಗಿಹೋದವು. ಮನದಣಿ ಕಣ್ಣೀರು ಹೋಗುವದರಿಂದ ದುಃಖವು ಕಡಿಮೆಯಾಗಿ ಸ್ವಾಭಾ ವಿಕವಾದ ಶಾಂತಿಯು ಮನುಷ್ಯರಿಗೆ ದೊರೆಯುತ್ತದೆ. ಆದರೆ ಆ ಸಾಧನವು ಕಡಸೂರ್ಯನಿಗೆ ಸಾಧ್ಯವಿಲ್ಲದ್ದರಿಂದ ಮಿತ್ರ 'ನ ಅಂತಃಕರಣ ವೃತ್ತಿಯು ಬೆಂದು ಬೆಂಡಾಯಿತು. ಅದನ್ನು
ನೋಡಿ ಭ್ರಾತೃದುಃಖದಿಂದ ಚಂದ ನಮನಸ್ಸು ವಿಶೇಷ ವಾಗಿ ಕಳವಳಗೊಂಡಿತು. ಮತ್ತು ಅವನು ಕಾರಣವಿಲ್ಲದೆ ಅತ್ತಿತ್ತ ಸುಳಿದಾಡುವ ಗಾಳಿಯ ಒಂದು ಸುಳುವಿಗೆ ಒಂದು ಬೀಸಣಿಕೆಯನ್ನು ತಕ್ಕೊಂಡು ಸೂರ್ಯನಿಗೆ ಗಾಳಿಬೀಸಲಿಕ್ಕೆ ಸೂಚಿಸಿದನು. ಚಂದ್ರನ ಸೂಚನೆಯನ್ನು ಮನ್ನಿಸಿ, ಆ ಗಾಳಿ ಯ ಸುಳುವು ಒಬ್ಬ ಪರಿಚಾರಿಕೆಯಂತೆ ತನ್ನ ಕೆಲಸವನ್ನು ಬಹು ಚನ್ನಾಗಿ ಮಾಡಿತು. ಅದರಿಂದ ಮಿತ್ರನಿಗೆ ಸ್ವಲ್ಪ ಸಮಾಧಾನವೆನಿಸಿತು. ಆದರೆ ಸ್ವಾಭಾವಿಕವಾಗಿ ತಣ್ಣಗಿದ್ದ ಆ ಗಾಳಿಯು ಕೂಡ ಕೆಲಹೊತ್ತಿನಲ್ಲಿ ಸೂರ್ಯನಿಗೆ ಬೆಚ್ಚಗಾ ದಂತ ತೋರಿತು; ಹಾಗು ಅದರಿಂದ ಅವನ ದುಃಖದ, ಹಾಗು ಸಂತಾಪದ ಜ್ವಾಲೆಗಳು ಒತ್ತರದಿಂದ ಏಳಹತ್ತಿದವು. ಆಗ ಅವನು ಆ ದುಃಖವನ್ನು ಸಹಿಸಲಾರದೆ ಚಂದ್ರನಿಗೆ ಹೇಳಿದನೇ ನಂದರೆ:-

ಚಂದ್ರಾ, ಮಾಡುವದೇನು? ಈ ದುಃಖದಿಂದ ಯಾ ವಾಗಲೂ ನನಗೆ ಸಂತಾಪವಾಗುತ್ತದೆ. ಆದರೆ ಆ ಸಂತಾಪ ವನ್ನು ಕಳಕೊಳ್ಳಲಿಕ್ಕೆ ನನ್ನಲ್ಲಿ ಒಂದೂ ಸಾಧನವಿಲ್ಲ. ಮನು ಷ್ಯರಿಗಾದರೆ ತುಸು ಸಂತಾಪವಾದರೂ, ಅವರು ಯಾವ ದೊಂದು ವಿಶಾಲವಾದ ಶೀತೋದಕದ ಜಲಾಶಯದಲ್ಲಿ ಮನದ ಣಿಯಾಗಿ ಈಸು ಬೀಳುತ್ತಾರೆ; ಮತ್ತು ಅದರಿಂದ ಅವರ ಸಂ ತಾಪವು ಪರಿಹುದು ಅವರಿಗೆ ಬಹಳ ಸಮಾಧಾನವೆನಿಸು ಇದೆ; ಆದರೆ ನನ್ನ ಹತ್ತಿರ ಆ ಸಾ ಧ ನ ವೂ ಇಲ್ಲ, ನನ್ನ ಕೆಳಗಿರುವ ಈ ಶೀತೋದಕದಿಂದ ತುಂಬಿದ ಬಹು ದೊಡ್ಡ ಸಮುದ್ರವು ಎಲ್ಲ ಕಡೆಗೂ ಪಸರಿಸಿರುತ್ತದೆ. ಅದನ್ನು ನೋಡಿದೊಡನೆಯೇ ಇದರಲ್ಲಿ ಒಮ್ಮೆಲೆ ದುಮುಕಿ ಬಿಡಬೇ ಕೆನ್ನುವ ಹಾಗೆನಿಸುತ್ತದೆ; ಹಾಗು ಇದರ ಈ ಅಗಾಧ
ಗಾಂಭೀರ್ಯವನ್ನೂ , ಅತ್ಯಂತ ವಿಸ್ತಾರವನ್ನೂ ಕಂಡು ಯಾ ನಾಗೊಮ್ಮೆ ಇದರಲ್ಲಿ ಮನದಣಿಯಾಗಿ ಸ್ನಾನ ಮಾಡೇನೋ ಎಂದು ಮನಸ್ಸಿನಲ್ಲಿ ಆಗಾಗ್ಗೆ ಮೋಹವುಂಟಾಗುತ್ತದೆ. ಇದ ರ ಶೀತಲತೆಯು ಅತ್ಯಂತ ಮೋಹಕ, ಹಾಗು ಚಿತ್ತಾಕರ್ಷಕ ವಾಗಿರುವದರಿಂದ ಆಕಾಶದೊಳಗಿನ ಈ ಅತ್ಯುನ್ನತ ಪ್ರದೇಶ ದಿಂದ ಈ ಸಮುದ್ರದೊಳಗೆ ಪಾರಿಕೊಂಡು ಯಾವದೊಂದು ದೊಡ್ಡ ಚಿನ್ನದ ಮೀನದಂತೆ ಯಾವಾಗಲೂ ಅಲ್ಲಿ ಈಸುತ್ತಿರ ಬೇಕೆಂದೂ, ಇಲ್ಲವೆ ತೋಫಿನೊಳಗಿಂದ ಹೊರಟ ಕಾದ ಕೆಂಪ ಗುಂಡಿನಂತೆ ನೀರನ್ನು ಕೆಯ್ಯುತ್ತ ಇತ್ತಿಂದತ್ತ ಅತ್ತಿಂದಿತ್ತ ಓಡಾಡುತ್ತಿರಬೇಕೆಂದೂ ನನಗೆನಿಸುತ್ತದೆ! ಬಹು ಎತ್ತರದ ಪ್ರದೇಶದಿಂದ ಹಾರಿದ ಮಾನದಿಂದ ಹಾರುವಿಕೆಯಾದರೂ ಅತಿ ಆಳವಾಗಿ ಹೋಗುವದೆಂದನ್ನು ವಂತೆ, ಆಕಾಶದೊಳಗಿನ ನನ್ನಿ ಅತ್ಯುನ್ನತ ಪ್ರದೇಶದಿಂದ ಹಾರಿದರೆ, ನಾನು ನಿಶ್ಚಯವಾಗಿ ಸಮುದ್ರದ ತಳವನ್ನು ಸೇರುವೆನು; ಮತ್ತು ಅಲ್ಲಿಗೆ ಹೋದ ಬಳಿಕ, ದುರ್ಯೋಧನನು ಸಮಂತಕದೊಳಗಿನ ಆ ಸರೋವ ರದ ಬುಡಕ್ಕೆ ಹೋಗಿ 2ಜಲಸ್ತಂಭವನ್ನು ರಚಿಸಿ ಹ್ಯಾಗೆ ಕುಳಿ ತಿದ್ದನೋ, ಹಾಗೆ ನಾನೂ ನನ್ನಲ್ಲಿಯ ಸಂತಾಪ ಶಾಂತ ಮಾಗುವ ವರೆಗೆ ಅಲ್ಲಿಯೇ ಈ ಸಮುದ್ರದ ಬುಡದಲ್ಲಿ ಹುಟ್ಟಿ ದ್ದ ಯಾವದೊಂದು ಗಿಡಕ್ಕಾಗಲಿ, ಬಳ್ಳಿಗಾಗಲಿ ಗಟ್ಟಿಯಾಗಿ ಅವಚಿಕೊಂಡು ಕೊಡಬೇಕೆನ್ನುತ್ತೇನೆ. ಆದರೆ ಚಂದ್ರಾ, ನನ್ನ ದೈವದಲ್ಲಿ ಈ ಸುಖವೂ ಇಲ್ಲವಲ್ಲ? ನನ್ನೆದುರಿಗಿನ ಈ ಸಮು ದ್ರದೊಳಗಿನ ಶೀತ ಜಲವನ್ನು ನಾನು ಬರೇ ಕಣ್ಣಿನಿಂದ ನೋಡ ಬೇಕು ಮಾತ್ರ! ಹಾಗು ಮನದೊಳಗೆ ತಳಮಳಿಸಬೇಕು. ಇಷ್ಟೇ ನನ್ನ ಹಣೆಯಲ್ಲಿ ಬರೆದಿರುವದೆಂದು ನನಗೆ ತೋರು ಇದೆ. ಕೆಲವು ಮತಿಮಂದ ಜನರು ತಿಳಿದಿರುವದೇನಂದರೆ,
ಪ್ರತಿ ದಿವಸ ಸಾಯಂಕಾಲದಲ್ಲಿ ಅರುಣಾಚಲ ಪರ್ವತದ ಎತ್ತ ರಪ್ರದೇಶದಿಂದ ನಾನು ಪಶ್ಚಿಮ ಸಮುದ್ರದಲ್ಲಿ ಹಾರಿಕೊಳ್ಳು ತೇನೆಂದೂ, ಹಾಗು ಸಂಪೂರ್ಣ ರಾತ್ರಿಯನ್ನು ಅ ಸಮುದ್ರ ದಲ್ಲಿ ವಿಹರಿಸುತ್ತ ಕಳೆದು ವಿಶ್ರಾಂತಿ ಹೊಂದಿ ಹರುಷಗೊಂಡು ಮರುದಿವಸ ಬೆಳಿಗ್ಗೆ ಉದಯಾಚಲದ ದಿನ್ನೆ ಯನ್ನೇರಿ ಮೇಲಕ್ಕೆ ಬರುತ್ತೇನೆಂದೂ ಅನ್ನು ತ್ತಾರೆ. ಆದರೆ ಈ ಕಲ್ಪನೆಯು ಅವರ ಬುದ್ಧಿ ಮಾಂದ್ಯತ್ವವನ್ನು ಮಾತ್ರ ವ್ಯಕ್ತಗೊಳಿಸುತ್ತದೆ. ವಿತ್ತಾ, ಅಂಥ ಸುದೈವವು ನನಗೆಲ್ಲಿಯದೆ? ಜಗತ್ತಿನೊಳಗಿನ ತೀರ ಕ್ಷುದ್ರ ಅಂತಃಕರಣದ ಜನರು ಸಹ ಅವಶ್ಯವಿದ್ದಾಗ ಹಾಗು ಪ್ರಸಂಗ ಎಶೇಷದಲ್ಲಿ ಒಬ್ಬರಿಗೊಬ್ಬರು ಸಹಾಯಮಾಡು ತಾರೆ; ಆದರೆ ಜಗತ್ತಿನಲ್ಲಿ ಮಹಾಭೂತಗಳೆಂದೆನಿಸಿಕೊಳ್ಳುವ ನಾವು ಎಂದೂ ಪರಸ್ಪರರಿಗೆ ಸಹಾಯ ಮಾಡುವಂತಿಲ್ಲ. ನಿನ್ನ ತಣ್ಣೀರಿನಲ್ಲಿ ಸ್ನಾನಮಾಡುವೆನೆಂದು ನಾನು ಒಮ್ಮೆ ಸಮುದ್ರವನ್ನು ಕುರಿತು ಕೇಳಿಕೊಂಡಿದ್ದೆನು; ಆದರೆ ಅದು ಬರಬೇಡರೆಂದು ಖಂಡಿ ತವಾಗಿ ಹೇಳಿಬಿಟ್ಟಿತು.ಲಗ ಸಮುದ್ರವು ನಿರ್ದಯವಾಗಿ ನುಡಿದ ದೈನಂದರೆ,-“ದೂರಿನಿಂದಲೇ ನೀನು ನನ್ನ ಜಲರಾಶಿಯನ್ನು ಶೋಷಿಸುತ್ತಿರುವದಷ್ಟು ಸಾಕಾಗಿದೆ. ಸ್ನಾನ ಮಾಡಲಿಕ್ಕೆಂದು ನೀನು ಒಮ್ಮೆ ನನ್ನ ಬಲ ಶರೀರದಲ್ಲಿ ಪ್ರವೇಶದೆಯೆಂದರೆ ತೀರಿತು; ಅಷ್ಟರಲ್ಲಿ ನೀನು ನನ್ನನ್ನು ಸುಟ್ಟ ಸೂರೆಂ ಡೇಬಿಡುವೆ. ಆದ್ದರಿಂದ ನೀನು ನನ್ನಿಂದ ದೂರಿರುವದೇ ಯೋ ಗ್ಯವು! ಅಗಸ್ತ್ರ ಖುಷಿಯು ಒಮ್ಮೆ ತನ್ನ ಒಂದು ಆಚಮ ನದಿಂದ ನನ್ನನ್ನು ಬತ್ತಿಸಿ ಬಿಟ್ಟದ್ದನು; ರಾಗು ಶ್ರೀ ರಾಮ ಚ೦ದ್ರನು ತನ್ನ ಬಾಣದಿಂದ ನನ್ನನ್ನು ಗಾಯಗೊಳಿಸಿದ್ದನು. ಆ ವೇದನೆಗಳನ್ನು ನಾನು ಇನ್ನೂ ಮರೆತಿರುವದಿಲ್ಲ. ಹೀಗಿ ದ್ದು, ಈಗ ನಿನಗೆ ನನ್ನ ಬಲದಲ್ಲಿ ಸ್ನಾನಕ್ಕೆ ಅಪ್ಪಣೆಕೊಟ್ಟು,