ಮುಂಗಾರು ಮಳೆ - ಅರಳುತಿರು

ವಿಕಿಸೋರ್ಸ್ದಿಂದ

ಚಿತ್ರ: ಮುಂಗಾರು ಮಳೆ

ಸಾಹಿತ್ಯ: ಜಯಂತ್ ಕಾಯ್ಕಿಣಿ

ಗಾಯನ: ಶ್ರೇಯ ಘೋಷಾಲ್


ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ

ಬಾಡದಿರು ಸ್ನೇಹದ ಹೂವೇ ಪ್ರೇಮದ ಬಂದನದಲ್ಲಿ

ಮನಸಲ್ಲೇ ಇರಲಿ ಬಾವನೆ ಮಿಡಿಯುತಿರಲಿ ಮೌನ ವೀಣೇ ಹೀಗೇ ಸುಮ್ಮನೇ…


ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೇ

ಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೇ

ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ ನಮಗೇಕೆ ಅದರ ಯೋಚನೇ

ಬೇಡ ಗೆಳೆಯ ನಂಟಿಗೆ ಹೆಸರು ಯಾಕೇ ಸುಮ್ಮನೇ…. || ಅರಳುತಿರು ||


ಮಾತಿಗೆ ಮೀರಿದ ಬಾವದ ಸೆಳೆತವೇ ಸುಂದರ

ನಲುಮೆಯು ತುಂಬಿದಾ ಮನಸಿಗೆ ಬಾರದು ಬೇಸರ

ಬಾಳ ದಾರಿಯ ಬೇರೇಯಾದರು ಚಂದಿರ ಬರುವನು ನಮ್ಮ ಜೊತೆ ಕಾಣುವೆನು ಅವನಲ್ಲೇ ನಿನ್ನನು

ಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೇ……..|| ಅರಳುತಿರು ||