ಮುಂಡಧಾರಿಯ ತಲೆ ಮುಂದೆ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮುಂಡಧಾರಿಯ
ತಲೆ
ಮುಂದೆ
ಬರ್ಪುದ
ಕಂಡೆ.
ಜಟಾಧಾರಿಯ
ತಲೆ
ನಡೆದು
ಹೋಯಿತ್ತ
ಕಂಡೆ.
ಖಂಡಕಪಾಲಿಯ
ಖಂಡವ
ಕೊಯಿತ್ತ
ಕಂಡೆ.
ಬಾಲಬ್ರಹ್ಮಚಾರಿಯ
ಬಾರನೆತ್ತಿತ್ತ
ಕಂಡೆ.
ಭಕ್ತರೆಲ್ಲರೂ
ಸತ್ತು
ನೆಲಕ್ಕಿಕ್ಕಿತ್ತ
ಕಂಡೆ.
ಗುಹೇಶ್ವರಾ
ನೀ
ಸತ್ತು
ಲಿಂಗವಾಯಿತ್ತ
ಕಂಡೆ.