ಮುಗಿಲ ಮರೆಯ ಸೂರ್ಯನಂತೆ,
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮುಗಿಲ ಮರೆಯ ಸೂರ್ಯನಂತೆ
ನೆಲದ ಮರೆಯ ನಿಧಾನದಂತೆ
ಒರೆಯ ಮರೆಯ ಅಲಗಿನಂತೆ
ಹಣ್ಣಿನೊಳಗಣ ರಸದಂತೆ
ಶರಣನ ಶರೀರವ ಮರೆಗೊಂಡು
ಪರಮಪಾವನಮೂರ್ತಿ
ಪರಾಪರ
ತಾನು ತಾನಾಗಿರ್ದದನೇನೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.