ವಿಷಯಕ್ಕೆ ಹೋಗು

ಮುತ್ತಿನ ಮೊತ್ತವ ಕತ್ತೆಗಲಂಕರಿಸಿದಡೇನು

ವಿಕಿಸೋರ್ಸ್ದಿಂದ


ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಮುತ್ತಿನ ಮೊತ್ತವ ಕತ್ತೆಗಲಂಕರಿಸಿದಡೇನು ಅದಕೆ ಮುತ್ತಿನ ಬೆಲೆ ಗೊತ್ತಾಗಬಲ್ಲುದೆ ? ಬುತ್ತಿಯನೆನಿಸು ಹೊತ್ತು ನೆತ್ತಿಯಲ್ಲಿ ಹೊತ್ತಡೇನು ತೃಪ್ತಿಯಾಗಬಲ್ಲುದೆ ? ನೈಷೆ*ಯಿಲ್ಲದ ಕಷ್ಟಜೀವಿಗೆ ಇಷ್ಟಲಿಂಗವ ಕಟ್ಟಿದಡೇನು ಶ್ರೇಷ* ಶಿವಭಕ್ತನಾಗಬಲ್ಲನೆ ? ಅದು ಕಾರಣ
ಉತ್ತಮಾಧಿಕಾರಿಯನರಿದು ಇಷ್ಟಲಿಂಗವ ಕೊಟ್ಟ ಗುರುವಿಗೆ ಕೂಡಲಚೆನ್ನಸಂಗಯ್ಯನು ಮೆಚ್ಚಿ ಮನ್ನಣೆಯನೀವನು