ಮುನ್ನ ಕಾಲನ ವಿಟ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮುನ್ನ ವಿಟ ಶ್ವೇತನು ಶಿವ ಎಂಬ ಶಬ್ದದಿಂದೆ ಕಾಲನ ಕಂಟಕವ ಗೆಲಿದು ನೀಲಲೋಹಿತನ ಓಲಗದಲ್ಲಿರಲಿಲ್ಲವೆ ? ಮುನ್ನ ಸುಕುಮಾರನು ಪರಶಿವಲಿಂಗದರ್ಶನದಿಂದೆ ಯಮನಪುರಿಯ ಬಾಧೆಯ ನೀಗಿ ಹರನ ರಜತಾದ್ರಿಯಲ್ಲಿರಲಿಲ್ಲವೆ ? ಮುನ್ನ ಮಾರ್ಕಂಡೇಯನು ಪರಬ್ರಹ್ಮಲಿಂಗವ ಪೂಜಿಸಿ
ಯಮನ ಉರಹರಿದು ಹರನ ಕೈವಲ್ಯವ ಪಡೆಯಲಿಲ್ಲವೆ ? ಇದನರಿತು ಸ್ಥಿರವಾಗಿ ಪೂಜಿಸಿ ವರನ ಬೇಡಿರೋ ನಮ್ಮ ಅಖಂಡೇಶ್ವರ ಲಿಂಗದೇವನ.