ಮೂಡಣಗಿರಿಯಲ್ಲಿ ಸೂರ್ಯನುದಯವಾಗಲು ಮುಂದಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮೂಡಣಗಿರಿಯಲ್ಲಿ ಸೂರ್ಯನುದಯವಾಗಲು ಮುಂದಣ ಕೇರಿಯ ಕೋಳಿ ಕೂಗುತ್ತದೆ ನೋಡಾ. ಕೋಳಿಯ ದನಿಗೇಳುತ್ತ ಆ ಲೋಕದ ಪ್ರಾಣಿಗಳು ಪ್ರಣಮನಂಗೈಯ್ವುತ್ತಿಪ್ಪರು. ಕೋಳಿ ಸತ್ತಿತ್ತು
ಕೂಗು ಅಡಗಿತ್ತು. ಪ್ರಣಮನಂಗೆಯ್ವುತ್ತಿಪ್ಪ ಪ್ರಾಣಿಗಳೆಲ್ಲರು ಪ್ರಳಯವಾದುದ ಕಂಡು ಲೋಕಾಲೋಕದ ತೋರಿಕೆ ಏಕಾಕಾರವಾಯಿತ್ತು. ಅನುಪಮ ಲಿಂಗೈಕ್ಯಂಗೆ ಲೋಕ ಭ್ರಮೆಯುಂಟೆ? ನಿಭ್ರಾಂತನಾದ ನಿತ್ಯನಿರಂಜನನಿಗಿನ್ನೆತ್ತಳ ರಂಜನೆ ಹೇಳಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.