ಮೂರುಲೋಕಕೊಂದು ಪುಷ್ಪ ! ಆ ಪುಷ್ಪದ ಬಂಡ ಉಣಬಂದ ತುಂಬಿಯ ನೋಡಾ ! ತುಂಬುತ್ತ ಕೆಡಹುತ್ತಲೈದಾವೆ ಅವು ತಮ್ಮ ಪೂರ್ವಜನ್ಮಂಗಳಿಗೆ ! ಅದಕ್ಕೆ ಇಕ್ಕಿದೆನು ಒರೆಯ ಕಟ್ಟಿದೆನು ತೊಡರ ಓಡದ ಬಿರುದು ಗುಹೇಶ್ವರಾ.