ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗಾರ
ಅಂಗಾರ
[ಸಂಪಾದಿಸಿ]ದಕ್ಷಿಣ ಮಧ್ಯ ಏಷ್ಯದಲ್ಲಿ (ಸೈಬೀರಿಯದಲ್ಲಿ) ಇರುವ ಒಂದು ಪ್ರದೇಶ. ಇಲ್ಲಿ ಅಂಗಾರ ಹೆಸರಿನ ನದಿ ಹರಿಯುವುದರಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿದೆ. ಭೂಮಿಯ ಪ್ರಮುಖ ಸ್ಥಿರಪ್ರದೇಶಗಳ ಪೈಕಿ ಇದೂ ಒಂದೆನಿಸಿದೆ. ಹೆಸರಿದೆ.ಆಲ್ಟ್ರೆಡ್ಫ್ರಿವೆಗನರ್ನು ತನ್ನ ಭೂಖಂಡಗಳ ಚಲನಾ ಸಿದ್ಧಾಂತದಲ್ಲಿ, ಪ್ಯಾಂಜಿಯ ಸಮಗ್ರ ಭೂಭಾಗವು ವಿಭಾಗಗೊಂಡ ಉತ್ತರದ ಭಾಗವನ್ನು ಅಂಗಾರ ಅಥವಾ ಲಾರೇಷಿಯ ಭೂ ಫಲಕವೆಂದು ಹೆಸರಿಸಿರುವನು. ಪೃಥ್ವಿಯ ಸ್ಥಿರ ಭಾಗಗಳಲ್ಲಿ ಪ್ರಮುಖವಾದುದು;
ಭೂಗರ್ಭಶಾಸ್ತ್ರದ ಪ್ರಕಾರ ಪುರಾತನಯುಗಕ್ಕೆ (ಆರ್ಕೇಯನ್) ಸೇರಿದ ಪ್ರಾಚೀನಶಿಲೆಗಳಿಂದ ಆವರಿಸಲ್ಪಟ್ಟಿದೆ. ಆ ಯುಗದಲ್ಲಿ ಪುರಾತನ ಪರ್ವತಗಳೂ ಉದ್ಭವಿಸಿದುವು. ಅನಂತರ ಉಂಟಾಗಿರುವ ಸಂಚಯನಕಾರ್ಯದಿಂದ ಈ ಭಾಗಗಳ ಪ್ರಾಚೀನಶಿಲೆಗಳು ಒಳಭಾಗದಲ್ಲಿ ಸೇರಿಕೊಂಡಿವೆ. ಅಂಗಾರ ಭೂಮಿಯ ದಕ್ಷಿಣ ಮತ್ತು ಪುರ್ವ ಭಾಗಗಳಲ್ಲಿ ಇತ್ತೀಚೆಗೆ ಉದ್ಭವಿಸಿರುವ ಪರ್ವತಶ್ರೇಣಿಗಳು ಕಂಡುಬರುತ್ತವೆ. ಈ ಪ್ರದೇಶದ ಉತ್ತರ ಭಾಗದಲ್ಲಿ ಆರ್ಕ್ಟಿಕ್ ಸಾಗರವಿದೆ. ಪಶ್ಚಿಮದಲ್ಲಿ ಇತ್ತೀಚಿನ ಪರ್ವತಶ್ರೇಣಿಗಳಲ್ಲಿ ಒಂದಾದ ಯೂರಲ್ ಪರ್ವತವಿದೆ. ಪ್ರಿಕೇಂಬ್ರಿಯನ್ ಕಾಲದಿಂದ ಈ ಭಾಗದಲ್ಲಿ ನಗ್ನೀಕರಣಕಾರ್ಯ ನಡೆದು ಸೈಬೀರಿಯದ ತಗ್ಗಾದ ಮೈದಾನ ಪ್ರದೇಶ ಏರ್ಪಟ್ಟಿದೆ.