ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗುಲೀಮಾಲ

ವಿಕಿಸೋರ್ಸ್ ಇಂದ
Jump to navigation Jump to search

ಅಂಗುಲೀಮಾಲ[ಸಂಪಾದಿಸಿ]

ಬುದ್ಧನ ಸಮಕಾಲೀನನಾದ ಕುಖ್ಯಾತ ದರೋಡೆಕಾರ. ಇವನ ಹೆಸರಿನ ಉಲ್ಲೇಖ ಬೌದ್ಧತ್ರಿಪಿಟಕಗಳಲ್ಲಿ ದೊರೆಯುತ್ತದೆ. ಬೌದ್ಧರ ನಂಬಿಕೆಯಂತೆ ಇವನು ಕ್ಷೀಣಾಶ್ರವ ಅರ್ಹಂತರಲ್ಲಿ ಒಬ್ಬ. ಅತ್ಯಂತ ಕ್ರೂರಿಯಾಗಿದ್ದ ಈತ ಜನರನ್ನು ಕೊಂದು ಅವರ ಕೈಬೆರಳುಗಳನ್ನು ಕತ್ತರಿಸಿ ಮಾಲೆ ಹಾಕಿಕೊಳ್ಳುತ್ತಿದ್ದರಿಂದ ಇವನಿಗೆ ಅಂಗುಲೀಮಾಲ ಎಂಬ ಹೆಸರು ಬಂತು ಎಂದು ಐತಿಹ್ಯವಿದೆ. ಬುದ್ಧನ ಪ್ರಭಾವದಿಂದ ಇವನಿಗೆ ಹೃದಯಪರಿವರ್ತನೆಯಾಗಿ ಧರ್ಮಚಕ್ಷು ಪ್ರಾಪ್ತವಾಯಿತು. ಬುದ್ಧನಿಂದ ಭಿಕ್ಷುದೀಕ್ಷೆಯನ್ನು ಪಡೆದು ಸಂಘವನ್ನು ಸೇರಿದನೆಂದೂ ಕಥೆಯಿದೆ.