ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಃಕೋಪಕ
ಅಂತಃಕೋಪಕ ಉಗಿಗುಡಾಣದಲ್ಲಿನ (ಬಾಯ್ಲರ್) ಒತ್ತಡಕ್ಕೆ ವಿರುದ್ಧವಾಗಿ ಉಗಿಧಾರೆಯ ಸಹಾಯದಿಂದ ಗುಡಾಣದೊಳಕ್ಕೆ ನೀರನ್ನು ಬಲವಂತವಾಗಿ ನುಗ್ಗಿಸುವ ಸಾಧನವೇ ಅಂತಃಕೋಪಕ.ಸಮಾನ ಪರಿಸ್ಥಿತಿಗಳಲ್ಲಿ ಉಗಿಧಾರೆ (ಸ್ಟೀಮ್ ಜೆಟ್) ಚಲನಾತ್ಮಕ ಶಕ್ತಿ (ಕೈನೆಟಿಕ್ ಎನರ್ಜಿ) ಗುಡಾಣದಿಂದ ಹೊರಹೊಮ್ಮುವ ಜಲಧಾರೆಯ ಶಕ್ತಿಗಿಂತ ಬಹಳಷ್ಟು ಹೆಚ್ಚಿರುತ್ತದೆ. ಅದರಿಂದಾಗಿ ಅಂತಃಕೋಪಕ ಗುಡಾಣದೊಳಕ್ಕೆ ನೀರನ್ನು ನುಗ್ಗಿಸಬಲ್ಲುದು.ಚಿತ್ರ-1ಸಾಮಾನ್ಯ ಅಂತಃಕೋಪಕದ ಅತ್ಯಗತ್ಯ ಭಾಗಗಳೆಂದರೆ: 1.ಉಗಿಚುಳ್ಳಿ (ಸ್ಟೀಮ್ ನಾಜûಲ್) 2. ಮಿಳನ ನಳಿಗೆ(ಕಂಬೈನಿಂಗ್ ಟ್ಯೂಬ್) 3.ನಿರ್ಗಮನಾಳ 4. ನೀರಿನ ನಳಿಗೆ 5.ಹೊರಚೆಲ್ಲು ಕೋಣೆ (ಓವರ್‍ಫ್ಲೊ) ಸರಳ ರೀತಿಯ ಏಕನಳಿಗೆ ಅಂತಃಕೋಪಕವನ್ನು ಚಿತ್ರದಲ್ಲಿ ತೋರಿಸಿದೆ. ಉಗಿಗುಡಾಣದಿಂದ ಹೊರಹೊಮ್ಮುವ ಉಗಿಯು, ಚುಳ್ಳಿಯ ಮೂಲಕ ಹಾಯ್ದು ಭರದಿಂದ ಹೊರಹೊಮ್ಮುತ್ತದೆ. ಈ ಉಗಿಯನ್ನು ಮಿಳನ ನಾಳದಲ್ಲಿ ನೀರಿನಿಂದ ತಣಿಸಿದಾಗ, ಅಲ್ಲಿ ನಿರ್ವಾತ ಪ್ರದೇಶ ಉಂಟಾಗುತ್ತದೆ. ಇದರಿಂದಾಗಿ ನೀರಿನ ನಳಿಗೆಯ ಮೂಲಕ ನಿರ್ವಾತ ಪ್ರದೇಶದ ಕಡೆಗೆ ನುಗ್ಗುತ್ತದೆ. ಹೀಗೆ ಒಳನುಗ್ಗುವ ತಣ್ಣೀರು ಮಿಳನ ನಾಳದಲ್ಲಿ ಹರಿಯುವಾಗ ಉಗಿಯನ್ನು ತಣಿಸುತ್ತದೆ. ಈ ರೀತಿ ಉಂಟಾದ ಜಲಧಾರೆ, ಮೊದಮೊದಲು ಕೋಣೆಯ ಮೂಲಕ ಹೊರದೂಡಲ್ಪಡುತ್ತದೆ. ಜಲಧಾರೆಯ ವೇಗ ಹೆಚ್ಚಿದಂತೆಲ್ಲ ಅದು ಗುಡಾಣದಲ್ಲಿನ ಒತ್ತಡವನ್ನು ಒತ್ತಿಕ್ಕುವಷ್ಟು ರಭಸವನ್ನು ಪಡೆಯುತ್ತದೆ. ಪರಿಣಾಮ_ ನೀರು ನಿರ್ಗಮ ನಾಳವನ್ನು ಹಾಯ್ದು ತಡೆಕವಾಟದ (ಚೆಕ್ ವಾಲ್ವ್) ಮೂಲಕ ಉಗಿಯ ಗುಡಾಣವನ್ನು ಸೇರುತ್ತದೆ.ಅಂತಃಕೋಪಕ ಗುಡಾಣಕ್ಕೆ ನಿರೊದಗಿಸುವ ಸಾಧನವಾದ ಅದರ ಶಾಖ ಕಾರ್ಯಸಾಮಥ್ರ್ಯ (ಥರ್ಮಲ್ ಎಫಿóಷಿಯೆನ್ಸಿ) ನೂರಕ್ಕೆ ನೂರು. ಗುಡಾಣಕ್ಕೆ ನೀರೊದಗಿಸುವ ಸಾಧನವಾಗಿ ಅಂತಃಕೋಪಕ ಅನ್ಯೋನ್ಯ ಕಾರ್ಯಸಾಮಥ್ರ್ಯವನ್ನು ಪಡೆದಿದ್ದರೂ ಈ ನಿಟ್ಟಿನಲ್ಲಿ ಅದು ಅತ್ಯಂತ ಮಿತವ್ಯಯದ ಸಾಧನ ಆಗಲಾರದು. ಕಾರಣ ಬಿಸಿ ನೀರನ್ನು ತನ್ನ ಕಾರ್ಯಾಚರಣೆಯಲ್ಲಿ ಬಳಸಲಾಗದ ಇದರ ಅಸಮರ್ಥತೆ. ಅಂದರೆ, ಬೇರೆ ಮೂಲಗಳಿಂದ ಒದಗಬಹುದಾದ ವ್ಯರ್ಥ ಶಾಖದ ಪ್ರಯೋಜನವನ್ನು ಇದು ಪಡೆಯಲಾರದು.ಅಂತಃಕೋಪಕ ವಿಶೇಷವಾಗಿ ಸ್ವಯಂಚಲಿಸುವ ಎಂಜಿನ್ನುಗಳಲ್ಲಿ (ಲೊಕೊಮೋಟಿವ್ಸ್) ಉಪಯೋಗದಲ್ಲಿದೆ. ಪಂಪನ್ನಾಗಿ ಬಳಸಿದಾಗ ಇದರ ಕಾರ್ಯಸಾಮರ್ಥ ಸಾಮಾನ್ಯವಾಗಿ ಶೇಕಡ ಒಂದರಿಂದ ಎರಡು.(ಬಿ.ಎಲ್.ಎಸ್.)