ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರಗಂಗೆ
ಗೋಚರ
ಅಂತರಗಂಗೆ 1 ಹಿಂದೂ ಜನರಿಗೆ ಅತ್ಯಂತ ಪವಿತ್ರವಾದ ತೀರ್ಥಗಳಲ್ಲಿ ಗಂಗೆ ಬಹಳ ಪ್ರಸಿದ್ಧವಾದುದು. ಸಮಗ್ರ ಭಾರತದಲ್ಲಿ ಆ ಹೆಸರಿನ ಹಲವು ತೀರ್ಥಗಳನ್ನು ನಾವು ಕಾಣಬಹುದು: ಪಾತಾಳಗಂಗೆ, ಶಿವಗಂಗೆ, ಸಿದ್ಧಗಂಗೆ, ದೇವಗಂಗೆ ಮೊದಲಾದುವುಗಳು ಇದಕ್ಕೆ ಉದಾಹರಣೆಗಳು. ಅಂತರಗಂಗೆ ಎಂಬುದು ಇದೇ ವರ್ಗದ ಒಂದು ತೀರ್ಥ. ಈ ಹೆಸರಿನ ಒಂದು ತೀರ್ಥ ಕೋಲಾರಕ್ಕೆ ಸಮೀಪದಲ್ಲಿರುವ ಶತಶೃಂಗಪರ್ವತದಲ್ಲಿದೆ. ಇಲ್ಲಿ ಸ್ನಾನಪೂಜಾದಿಗಳು ಬಹಳ ಪವಿತ್ರವೆಂದು ಭಕ್ತರು ಭಾವಿಸುತ್ತಾರೆ. ಬೆಂಗಳೂರು ಜಿಲ್ಲಾ ಕುದೂರಿನಲ್ಲಿಯೂ ಈ ಹೆಸರಿನ ಒಂದು ತೀರ್ಥವಿದೆ.(ಬಿ.ಎಸ್.)