ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ಅಣುಶಕ್ತಿನಿಯೋಗ

ವಿಕಿಸೋರ್ಸ್ ಇಂದ
Jump to navigation Jump to search

ಅಂತರರಾಷ್ಟ್ರೀಯ ಅಣುಶಕ್ತಿನಿಯೋಗ

 ಇದು 1957ರ ಜುಲೈ 29ನೆಯ ತಾರೀಖು ಅಸ್ತಿತ್ವಕ್ಕೆ ಬಂತು. ಪರಮಾಣುಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗೆ ಅಂದರೆ ಪ್ರಪಂಚದಾದ್ಯಂತ ಸಾರ್ವಜನಿಕ ಆರೋಗ್ಯ ಮತ್ತು ಸಂಪದಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲು ಸಾಧ್ಯವಾಗುವಂತೆ ಮಾಡುವುದೇ ಇದರ ಮೂಲ ಉದ್ದೇಶ. ಪರಮಾಣುಶಕ್ತಿಯನ್ನು ಉತ್ಪಾದಿಸಲು ಈ ನಿಯೋಗದಿಂದ ಆರ್ಥಿಕ ನೆರವನ್ನು ಪಡೆದ ಯಾವ ರಾಷ್ಟ್ರವಾಗಲಿ ತಾನು ಉತ್ಪಾದಿಸಿದ ಪರಮಾಣುಶಕ್ತಿಯನ್ನು ಯುದ್ಧೋದ್ಯಮಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಲು ಈ ನಿಯೋಗ ಒಂದು ಹತೋಟಿಕ್ರಮವನ್ನು ಇಟ್ಟುಕೊಂಡಿದೆ. ಇದರ ಕೇಂದ್ರಕಚೇರಿ ಆಸ್ಟ್ರಿಯಾದ ವಿಯನ್ನಾದಲ್ಲಿದೆ.

 j