ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರಾಳ

ವಿಕಿಸೋರ್ಸ್ ಇಂದ
Jump to navigation Jump to search

ಅಂತರಾಳ ಮುಖ್ಯ ಕೋಣೆಯನ್ನು ಪ್ರವೇಶಿಸುವುದಕ್ಕೆ ಮುನ್ನ ಇರುವ ಚಿಕ್ಕ ಕೋಣೆಯೇ ಅಂತರಾಳ. ಇದನ್ನು ಮುಂಗೋಣೆ (ಆಂಟಿ ರೂಮ್) ಎನ್ನಬಹುದು. ಭಾರತದ ದೇವಾಲಯಗಳಲ್ಲಿ ಇಂಥ ಕೋಣೆಯನ್ನು ಕಾಣಬಹುದು. ದೇವರ ಪ್ರತಿಮೆ ಇರುವ ಗರ್ಭಗೃಹಕ್ಕೂ ಭಕ್ತಾದಿಗಳು ನಿಲ್ಲುವ ಸ್ಥಳವಾದ ಮಂಟಪಕ್ಕೂ ಇದು ಮಧ್ಯೆ ಇರುತ್ತದೆ. (ಕೆ.ಎಸ್.ಎಸ್)