ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬರೀಷ
ಗೋಚರ
ಅಂಬರೀಷ
[ಸಂಪಾದಿಸಿ]ಮಹಾಭಾರತ ಮತ್ತು ಭಾಗವತಗಳಲ್ಲಿ ಪ್ರಸಿದ್ಧ ವಿಷ್ಣುಭಕ್ತರ ಶ್ರೇಣಿಗೆ ಸೇರಿದವನು. 2. ಅದ್ಭುತರಾಮಾಯಣದ ಪ್ರಕಾರ ಇವನ ಮಗಳಾದ ಶ್ರೀಮತಿಯನ್ನು ಮೋಹಿಸಿ ಬಂದ ಪರ್ವತ ನಾರದರು ವಿಷ್ಣುವಿನ ಮಾಯೆಯಿಂದ ಕಪಿಕೋಡಗಗಳಾಗಿ ಕಾಣಿಸಿದುದರಿಂದ ಅವಳು ಇವರಿಗೆ ಮಾಲೆ ಹಾಕದೆ ಇವರ ಮಧ್ಯೆ ಕಾಣಿಸಿಕೊಂಡ ವಿಷ್ಣುವಿಗೆ ಮಾಲೆ ಹಾಕಿದಳು. ಕೋಪಗೊಂಡ ಪರ್ವತ ನಾರದರು ಅಂಬರೀಷನನ್ನು ಶಪಿಸಲು ಹೋಗಿ ವಿಷ್ಣುಚಕ್ರದಿಂದ ಪರಾಜಿತರಾದರು.