ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬಿಕಾನಗರ

ವಿಕಿಸೋರ್ಸ್ ಇಂದ
Jump to navigation Jump to search

ಅಂಬಿಕಾನಗರ

ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನಲ್ಲಿ ನಿರ್ಮಿತವಾದ ಒಂದು ಪಟ್ಟಣ. ಕರ್ನಾಟಕ ವಿದ್ಯುತ್ ನಿಗಮದಿಂದಲೇ ಮೊದಲಿಗೆ ಅಮಗಾ ಜಮಗಾ ಹಳ್ಳಿಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಈ ಸ್ಥಳ ಇಂದು ಬೆಳೆಯುತ್ತಿರುವ ಒಂದು ಪಟ್ಟಣವಾಗಿದೆ. ಇಲ್ಲಿನ ಕಾಳಿನದಿ ಜಲವಿದ್ಯುತ್ ಯೋಜನೆಯು ರಾಜ್ಯದಲ್ಲಿಯೇ ಅತಿ ದೊಡ್ಡದಾದ ವಿದ್ಯುತ್ ಉತ್ಪಾದನಾ ಸ್ಥಾವರ. ಕವಳೆಗುಹೆ, ಸೈಕ್ಸ್‍ಪಾಯಿಂಟ್ ಮತ್ತು ದಾಂಡೇಲಿ ಮೃಗಧಾಮಗಳಿಗೆ ಹೋಗುವ ಪ್ರವಾಸಿಗಳಿಗೆ ಇದು ಕೇಂದ್ರವಾಗಿದೆ. ಇಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಸುಂದರ ಪ್ರವಾಸಿಮಂದಿರವಿದೆ.             

(ಬಿ.ಎನ್.ಎಂ.)