ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಕ್ಷರತೆ

ವಿಕಿಸೋರ್ಸ್ದಿಂದ
Jump to navigation Jump to search

ಅಕ್ಷರತೆ[ಸಂಪಾದಿಸಿ]

ಅಕ್ಷರಜ್ಞಾನವನ್ನು ಹೊಂದಿರುವುದು, ಸಾಕ್ಷರತೆ (ಲಿಟರಸಿ) ಎಂದರ್ಥ. ಜ್ಞಾನಾರ್ಜನೆಯ ಸಾಧನಗಳಲ್ಲಿ ಅಕ್ಷರತೆ ಬಹಳ ಮುಖ್ಯವಾದುದು. ಮುಂದುವರಿದ ರಾಷ್ಟ್ರಗಳಲ್ಲೆಲ್ಲ ಅಕ್ಷರತೆ ಹೆಚ್ಚಾಗಿರುತ್ತದೆ. ಹಿಂದುಳಿದ ರಾಷ್ಟ್ರಗಳಲ್ಲಿ ನಿರಕ್ಷರತೆ (ಇಲ್ಲಿಟರಸಿ) ಹೆಚ್ಚಾಗಿರುತ್ತದೆ. ಅಕ್ಷರತೆಯ ಗಣತಿಗಾಗಿ 15 ವರ್ಷಕ್ಕೆ ಮೇಲ್ಪಟ್ಟವರನ್ನು ವಂiÀÄಸ್ಕರೆಂದು ಪರಿಗಣಿಸಲಾಗಿದೆ. ಪ್ರಪಂಚದಲ್ಲಿ ಶೇ.44 ನಿರಕ್ಷರಸ್ಥರಿದ್ದಾರೆ. ಇವರಲ್ಲಿ ಹೆಂಗಸರು ಹೆಚ್ಚು.

ಅಮೆರಿಕ ಶೇ.99, ಯುಕೆ ಶೇ.99, ಬ್ರೆಜಿಲ್ ಶೇ.85, ಚೀನ ಶೇ.84, ಕುವೈತ್ ಶೇ.83, ಜಪಾನ್ ಮುಂತಾದ ದೇಶಗಳಲ್ಲಿ ಶೇ.60 ಕ್ಕಿಂತ ಹೆಚ್ಚು ಜನ ಅಕ್ಷರಸ್ಥರಿದ್ದಾರೆ (ಲಿಟರೇಟ್ಸ್). ಭಾರತದಲ್ಲಿ (1907) 57, ಅಂಗೋಲ, ಸೊಮಾಲಿಯ ಶೇ.24, ನೈಜೀರಿಯ ಶೇ.16 ಅಕ್ಷರತೆ ಶೇ.24.4 ಇವರ ಸಂಖ್ಯೆ 1951ರಲ್ಲಿ 16.6, 1931ರಲ್ಲಿ ಶೇ.10.5, 1907ರಲ್ಲಿ ಶೇ.7 ಆಗಿತ್ತು.

ಸಾಮಾನ್ಯವಾಗಿ ಉಚಿತವಾದ ಮತ್ತು ಕಡ್ಡಾಯವಾದ ಪ್ರಾಥಮಿಕ ಶಿಕ್ಷಣ ಜಾರಿಯಲ್ಲಿರುವ ರಾಷ್ಟ್ರಗಳಲ್ಲಿ ಸಾಕ್ಷರತೆಯ ಮಟ್ಟ ಹೆಚ್ಚಾಗಿರುತ್ತದೆ. ಆಯಾ ದೇಶದ ಸ್ಥಿತಿಗತಿಗಳಿಗನುಗುಣವಾಗಿ ಸಾಕ್ಷರತೆಯ ಮಟ್ಟ ವ್ಯತ್ಯಾಸವಾಗುತ್ತದೆ. ಯುನೆಸ್ಕೊ ಸಂಸ್ಥೆ ಏರ್ಪಡಿಸಿದ್ದ ಸಮಿತಿಯೊಂದು ಇದರ ಬಗ್ಗೆ ಪರಿಶೀಲನೆ ನಡೆಸಿ ಓದಿ ವಿಷಯವನ್ನು ಗ್ರಹಿಸಿಕೊಳ್ಳುವುದರ ಜೊತೆಗೆ ನಿತ್ಯಜೀವನಕ್ಕೆ ಸಂಬಂಧಪಟ್ಟ, ವಿಷಯವನ್ನು ಸರಳವಾದ ಶೈಲಿಯಲ್ಲಿ ಬರೆಯುವ ಶಕ್ತಿಯನ್ನು ಮಾತ್ರ ಪಡೆದಿದ್ದು, ಬರೆಹ ತಿಳಿಯದವನ್ನು ಅರೆಅಕ್ಷರಸ್ಥನೆಂದೂ ವಿವರಿಸಿದೆ.

ಮುಂದುವರಿಯುತ್ತಿರುವ ದೇಶಗಳೆಲ್ಲ ತಮ್ಮ ದೇಶದ ಸಾಕ್ಷರತೆಯ ಮಟ್ಟವನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿವೆ. ಸಾಕ್ಷರತೆ ಕಡಿಮೆ ಇರುವ ದೇಶಗಳಲ್ಲೆಲ್ಲ ವಂiÀÄಸ್ಕರ ಶಿಕ್ಷಣಸಂಸ್ಥೆಗಳು ಅಕ್ಷರಪ್ರಚಾರಕ್ಕೆ ಹೆಚ್ಚು ಗಮನಕೊಡುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಶೇ.66.64 ಅಕ್ಷರಸ್ಥರಿದ್ದಾರೆ. ಗಂಡಸರಲ್ಲಿ ಶೇ.76.10, ಹೆಂಗಸರಲ್ಲಿ ಶೇ.56.87 ಅಕ್ಷರಸ್ಥರು. ಹಳ್ಳಿಗಳಲ್ಲಿ ಸಾಕ್ಷರತೆ ಶೇ.19.9, ಪಟ್ಟಣಗಳಲ್ಲಿ ಶೇ.44.3. ಸಾಕ್ಷರತೆಯ ಮಟ್ಟ ದೆಹಲಿಯಲ್ಲಿ ಶೇ.81.67 ಕೇರಳದಲ್ಲಿ ಶೇ.90.86 ತಮಿಳುನಾಡಿನಲ್ಲಿ ಶೇ.30.2. ಬಿಹಾರ, ರಾಜಸ್ತಾನ, ಮಧ್ಯಪ್ರದೇಶ, ಉತ್ತರಪ್ರದೇಶಗಳಲ್ಲಿ ಸಾಕ್ಷರತೆ ಬಹಳ ಕಡಿಮೆ. ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆಯನ್ನು ಪ್ರಸಾರ ಮಾಡುವ ಕೆಲಸ ಸರ್. ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗಲೇ (1912) ಪ್ರಾರಂಭವಾಯಿತು. ಕಾರಣಾಂತರಗಳಿಂದ ನಿಂತಿದ್ದ ಆ ಕಾರ್ಯವನ್ನು 1941ರಿಂದ ಈಚೆಗೆ ಸಂಸ್ಥಾನದ ವಯಸ್ಕರ ಶಿಕ್ಷಣಸಮಿತಿ ಕೈಗೊಂಡಿದೆ. ಅದು ಸಾಕ್ಷರತೆಯ ಮಟ್ಟವನ್ನು ಈ ನಿರ್ಣಯಗಳಿಂದ ಸೂಚಿಸಿದೆ. ವೃತ್ತಪತ್ರಿಕೆಗಳಲ್ಲಿ ಬರುವ ಲೇಖನ, ವರ್ತಮಾನ, ಜಾಹೀರಾತು ಮೊದಲಾದವು ಗಳನ್ನು ಓದಿ ಅರ್ಥಮಾಡಿಕೊಳ್ಳುವುದು. ಸುಲಭ ಲೆಕ್ಕಾಚಾರವನ್ನೂ 1-100ರವರೆಗಿನ ಅಂಕಿಗಳನ್ನೂ ತಿಳಿದಿರುವುದು. ಬಂಧುವಿಗೆ ಒಂದು ಕಾಗದವನ್ನು ಬರೆಯುವ ಶಕ್ತಿ, ಬಂದ ಉತ್ತರವನ್ನು ಓದಿ ಅರ್ಥಮಾಡಿಕೊಳ್ಳುವ ಶಕ್ತಿ ಪಡೆದಿರುವುದು. ಈ ಮಟ್ಟವನ್ನು ಸಾಧಿಸಲು ನಿರ್ದಿಷ್ಟ ಪಠ್ಯಪುಸ್ತಕಗಳ ಸಹಾಯದಿಂದ ಕೇವಲ 150 ಗಂಟೆಗಳಲ್ಲಿ (5-6 ತಿಂಗಳು) ವಯಸ್ಕರ ಓದು ಬರೆಹ ಕಲಿಸುವ ಯೋಜನೆಯನ್ನು ಸಮಿತಿ ಆಚರಣೆಗೆ ತಂದಿದೆ. ಬೇಗ ಕಲಿತ ಅಕ್ಷರ ಮರೆತು, ನಿರಕ್ಷರತೆಗೆ ಪುನಃ ಜಾರದಿರಲೆಂದು ಹೊಸದಾಗಿ ಅಕ್ಷರಕಲಿತ ವಂiÀÄಸ್ಕರಿಗಾಗಿಯೇ ವಿಶೇಷ ರೀತಿಯಲ್ಲಿ ರಚಿಸಿದ ಬೆಳಕು ವಾರಪತ್ರಿಕೆಯನ್ನೂ ಮೂರು ಹಂತಗಳ ಓದುಪುಸ್ತಕಗಳನ್ನೂ ಕಿರುಹೊತ್ತಗೆಗಳ ಮಾಲೆಯನ್ನೂ ಸಮಿತಿ ಪ್ರಕಟಿಸುತ್ತಿದೆ (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಯಸ್ಕರ-ಶಿಕ್ಷಣ|ವಯಸ್ಕರ-ಶಿಕ್ಷಣ).