ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನಿಲಿನ್

ವಿಕಿಸೋರ್ಸ್ದಿಂದ

ಅನಿಲಿನ್

ಆರೊಮ್ಯಾಟಿಕ್ ಗುಂಪಿಗೆ ಸೇರಿದ, ಸಾರಜನಕ ಹೊಂದಿರುವ ಸಾವಯವ ರಾಸಾಯನಿಕ ವಸ್ತು (ಅಮೈನೊ ಬೆಂಜೀನ್, ಫೀನೈಲ್ ಅಮೀನ್); ದುರ್ಬಲಕ್ಷಾರ. ಸಸ್ಯಜನ್ಯವಾದ ನೀಲಿ ಅಥವಾ ಇಂಡಿಗೊವನ್ನು ಪೊಟ್ಯಾಸಿಯಂ ಹೈಡ್ರಾಕ್ಸೈಡ್‍ನೊಂದಿಗೆ ಕುದಿಸಿದಾಗ ದೊರೆತ ವಸ್ತುವಿಗೆ, ಈ ಹೆಸರನ್ನು 1841ರಲ್ಲಿ. ಫ್ರಿಟ್ಸ್ (ಈಡಿiಣxsಛಿhe) ಎಂಬವನು ನೀಡಿದ. ಇದಕ್ಕೆ ಮುಂಚೆ ಅಂದರೆ 1826ರಲ್ಲಿ ಇಂಡಿಗೊದಿಂದಲೂ 1834ರಲ್ಲಿ ಟಾರಿನಿಂದಲೂ ಇದನ್ನೂ ತಯಾರಿಸಲಾಗಿತ್ತು. 1856ರಲ್ಲಿ ಪರ್ಕಿನ್[] ಎಂಬವನು ಅನಿಲಿನ್ನಿನಿಂದ ಮೋವ್ (ಒಚಿuve) ಎಂಬ ಧೂಮ್ರವರ್ಣದ ಮೊದಲ ಸಂಶ್ಲೇಷಿತಬಣ್ಣವನ್ನು ತಯಾರಿಸಿದ. ಅಂದಿನಿಂದ ಅದರ ಅನೇಕ ಗುಣಗಳಿಂದಾಗಿ-ಮುಖ್ಯವಾಗಿ ನೈಟ್ರಸ್ ಆಮ್ಲದೊಂದಿಗೆ ಸೇರಿಕೊಂಡು ಡೈ ಆಜೊನಿಯಂ ಸಂಯುಕ್ತವಸ್ತುವಾಗುವುದು; ಹೀಗೆ ಆದ ವಸ್ತು ಫೀನಾಲ್ ಮತ್ತು ಆರೊಮ್ಯಾಟಿಕ್ ಅಮೀನ್‍ಗಳ ಗುಂಪಿನ ರಾಸಾಯನಿಕ ವಸ್ತುಗಳೊಂದಿಗೆ ಸೇರಿಕೊಂಡು ವಿವಿಧ ಬಣ್ಣದ ವಸ್ತುಗಳಾಗುವುದು ಬಣ್ಣದ ತಯಾರಿಕೆಯಲ್ಲಿ ಅನಿಲಿನ್‍ಅನ್ನು ಪ್ರಾರಂಭದ ಹೆಚ್ಚು ಉಪಯುಕ್ತ ಸಾಮಗ್ರಿಯಾಗುವಂತೆ ಮಾಡಿವೆ. ಇದಲ್ಲದೆ ಔಷಧಗಳು, ಸಂಶ್ಲೇಷಿತ ರಬ್ಬರ್, ಸ್ಫೋಟಕಗಳು, ಮುಂತಾದವುಗಳಿಗೆ ಪ್ರಾರಂಭದ ರಸಾಯನವಸ್ತು ಅನಿಲಿನ್.

ತಯಾರಿಕೆ

[ಸಂಪಾದಿಸಿ]

ಟಾರ್‍ನಲ್ಲಿ ಸ್ವಲ್ಪ ಮಾತ್ರ ಅನಿಲಿನ್ ಇರುವುದು. ಆದುದರಿಂದ ನೈಟ್ರೋಬೆಂಜೀನನ್ನು ಅಪಕರ್ಷಣಕ್ಕೆ ಒಳಪಡಿಸಿ ಅನಿಲಿನ್‍ಅನ್ನು ತಯಾರಿಸುತ್ತಾರೆ. ಬೆಂಜೀನನ್ನು ಗಂಧಕಾಮ್ಲ ಮತ್ತು ನೈಟ್ರಿಕ್ ಆಮ್ಲದೊಂದಿಗೆ ಹೆಚ್ಚು ಉಷ್ಣತೆಯಲ್ಲಿ ಕುದಿಸಿ, ಬಟ್ಟಿಯಿಳಿಸಿ ಬಂದ ನೈಟ್ರೋಬೆಂಜೀನ್‍ನನ್ನು ಕಬ್ಬಿಣದ ಅರಪುಡಿ, ನೀರು, ಸ್ವಲ್ಪ ಹೈಡ್ರೊಕ್ಲೋರಿಕ್ ಆಮ್ಲಗಳೊಂದಿಗೆ ಕುದಿಸಲಾಗುವುದು; ಈ ಹಬೆಯನ್ನು ಜಲಜನಕದ ಅಪಕರ್ಷಣಕ್ಕೆ ಒಳಪಡಿಸಿ ಬಂದ ಅನಿಲಿನ್ ಅನ್ನು ಕಡಿಮೆ ಮಾಡಿದ ಒತ್ತಡದಲ್ಲಿ ಹಬೆಯ ಬಟ್ಟಿಯಿಳಿಸಿ ಬೇರ್ಪಡಿಸುತ್ತಾರೆ. ಹೆಚ್ಚು ಉಷ್ಣತೆ ಮತ್ತು ಒತ್ತಡದಲ್ಲಿ ತಕ್ಕ ವೇಗೋತ್ಕರ್ಷಕಗಳ ಸಹಾಯದಿಂದ ಕ್ಲೋರೋಬೆಂಜೀನನ್ನು ಅಮೋನಿಯದೊಂದಿಗೆ, ರಾಸಾಯನಿಕಕ್ರಿಯೆ ಹೊಂದುವಂತೆ ಮಾಡುವುದು ತಯಾರಿಕೆಯ ಇನ್ನೊಂದು ಮಾರ್ಗ.

ಗುಣಗಳು ಮತ್ತು ಉಪಯೋಗಗಳು

[ಸಂಪಾದಿಸಿ]

ಇದರ ಅಣುಸೂತ್ರ ಅ6ಊ5ಓಊ2 ಶುದ್ಧವಾದ ಅನಿಲಿನ್ ಬಣ್ಣವಿಲ್ಲದ. ಎಣ್ಣೆಯಂತಿರುವ ದ್ರವ. ಇದರ ಕುದಿಯುವ ಬಿಂದು 184.4( ಸೆಂ.ಗ್ರೇ. ಮತ್ತು ದ್ರವಿಸುವ ಬಿಂದು- 8( ಸೆಂ.ಗ್ರೇ. ನೀರಿನಲ್ಲಿ ಅತಿ ಸ್ವಲ್ಪ ಭಾಗ ಅಂದರೆ, 31 ಭಾಗ ನೀರಿನಲ್ಲಿ 1 ಭಾಗ ಮಾತ್ರ, ಕರಗುತ್ತದೆ. ಸುಲಭವಾಗಿ ಗುರುತಿಸಬಹುದಾದ ವಿಶಿಷ್ಟವಾಸನೆ ಮತ್ತು ರುಚಿ ಇದಕ್ಕೆ ಇವೆ. ಗಾಳಿಗೆ ತೆರೆದಿಟ್ಟಾಗ ಆಮ್ಲಜನಕದೊಂದಿಗೆ ಸೇರಿ ಅದರ ಬಣ್ಣ ನಿಧಾನವಾಗಿ ಬದಲಾವಣೆ ಹೊಂದಿ ಕಡೆಗೆ ಕೆಂಪುಮಿಶ್ರಿತ ಕಂದುಬಣ್ಣವಾಗುತ್ತದೆ.

ಅನಿಲಿನ್ ಆರೊಮ್ಯಾಟಿಕ್ ಅಮೀನ್ ಅಗಿರುವುದರಿಂದ ಇದಕ್ಕೆ ಸಹಜವಾಗಿಯೇ ಆರೊಮ್ಯಾಟಿಕ್[] ರಾಸಾಯನಿಕವಸ್ತುಗಳ ಪ್ರತಿಸ್ಥಾಪನೆ (ಸಬ್‍ಸ್ಟಿಟ್ಯೂಷನ್) ಮುಂತಾದ ಗುಣಗಳೂ ಅಮೀನ್‍ಗಳ ಗುಣಗಳೂ ಇವೆ. ಇದು ದುರ್ಬಲಕ್ಷಾರವಾಗಿರುವುದರಿಂದ ಆಮ್ಲಗಳೊಡನೆ ವರ್ತಿಸುವುದು. ಗಂಧಕಾಮ್ಲದೊಂದಿಗೆ ವರ್ತಿಸಿ ಅನಿಲಿನ್ ಸಲ್ಫೇಟ್ ಆಗುತ್ತದೆ. ಈ ಅನಿಲಿನ್ ಸಲ್ಫೇಟನ್ನು 200( ಸೆಂ.ಗ್ರೇ. ಉಷ್ಣತೆಯಲ್ಲಿ ಕಾಯಿಸಿದರೆ ಬ್ಯಾಕ್ಟೀರಿಯಾನಾಶಕಗಳಾದ ಗಂಧಕಯುಕ್ತ ರಾಸಾಯನಿಕಗಳ ಸಲ್ಪನಿಲಮೈಡ್ ತಯಾರಾಗುತ್ತದೆ. ಸಾವಯವ ಆಮ್ಲವಾಗಿರುವ ಅಸಿಟಿಕ್ ಆಮ್ಲದೊಂದಿಗೆ ಸೇರಿ ಅಸಿಟನಿಲೈಡ್ ಆಗುತ್ತದೆ. ಅನಿಲಿನ್ ಸುಲಭವಾಗಿ ಉತ್ಕರ್ಷಣ ಹೊಂದಿ ವಿವಿಧ ಬಣ್ಣದ ವಸ್ತುಗಳಾಗುತ್ತದೆ. ಕ್ರೋಮಿಕ್ ಆಮ್ಲದಿಂದ ಕ್ವಿನೋನು, ಮೈಲುತುತ್ತ, ಪರ್‍ಮ್ಯಾಂಗನೇಟ್‍ನಿಂದ ಆಜೊಬೆಂಜೀನ್-ಈ ವಸ್ತುಗಳು ಆಗುತ್ತವೆ. ಹೀಗೆ ಉತ್ಕರ್ಷಣಕ್ರಿಯೆಯಿಂದ ಬರುವ ವಸ್ತುಗಳು ಉತ್ಕರ್ಷಕಗಳನ್ನು ಅವಲಂಬಿಸಿವೆ. ಬಟ್ಟೆಯ ಮೇಲೆಯೇ ಈ ರಾಸಾಯನಿಕಕಾರ್ಯ ಆಗುವಂತೆ ಮಾಡಿ ಬಣ್ಣದ ಬಟ್ಟೆಯನ್ನು ತಯಾರಿಸುತ್ತಾರೆ. ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಕರಗಿದ ಅನಿಲಿನ್ನನ್ನು ಮಂಜಿನ ಉಷ್ಣತೆಗೆ ತಗ್ಗಿಸಿ ಸೋಡಿಯಂ ನೈಟ್ರೈಟ್ ದ್ರಾವಣವನ್ನು ಹಾಕಿದರೆ ಡೈ ಆಜೊóಸಂಯುಕ್ತವಸ್ತುವಾಗುತ್ತದೆ. ಈ ವಸ್ತು ಸಾಧಾರಣ ಉಷ್ಣತೆಯಲ್ಲಿ ಸುಲಭವಾಗಿ ವಿಭಜನೆ ಹೊಂದಿ ಫೀನಾಲ್ ಆಗುತ್ತದೆ. ಕಡಿಮೆ ಉಷ್ಣತೆಯಲ್ಲಿ ಬೇರೆ ಬೇರೆ ರಾಸಾಯನಿಕಗಳೊಂದಿಗೆ ಸೇರಿಕೊಂಡು ಬಲು ಉಪಯುಕ್ತವಾಗಿರುವ ಆಜೊó ಬಣ್ಣಗಳನ್ನು ನೀಡುತ್ತದೆ.

ಆಜೊó ಬಣ್ಣಗಳು, ಸಂಶ್ಲೇಷಿತ ನೀಲಿ, ಬ್ಯಾಕ್ಟೀರಿಯಮಾರಕ ಸಲ್ಫನಿಲಮೈಡ್ ಮತ್ತು ಉಳಿದ ಔಷಧಗಳೂ ಪ್ರಪಂಚದ ಮೊದಲ ಯುದ್ಧದಲ್ಲಿ ಮುಖ್ಯ ಸ್ಫೋಟಕವಾಗಿದ್ದ ಟ್ರೈನೈಟ್ರೋ ಅನಿಲಿನ್-ಇವೆಲ್ಲ ವಸ್ತುಗಳ ತಯಾರಿಕೆಗೂ ಅನಿಲಿನ್ ಪ್ರಾರಂಭದ ಸಾಮಗ್ರಿ. ಸಮುದ್ರದ ನೀರಿನಿಂದ ಬ್ರೋಮಿನನ್ನು ತಯಾರಿಸಲು ಅನಿಲಿನ್ನನ್ನು ಉಪಯೋಗಿಸುತ್ತಾರೆ. ಇದಲ್ಲದೆ ಛಾಯಾಚಿತ್ರ ಕೈಗಾರಿಕೆಯಲ್ಲಿ ಬೇಕಾಗುವ ರಾಸಾಯನಿಕಗಳು, ಪ್ಲಾಸ್ಟಿಕ್ ಕೈಗಾರಿಕೆಗೆ ಬೇಕಾದ ಡೈಐಸೋ ಸಯನೇಟ್ ಉತ್ಪಾದನೆ. ರಾಕೆಟ್ಟಿನ ಇಂಧನ, ಪೆಟ್ರೋಲಿಯಂ ಶುದ್ಧೀರಣ-ಈ ಮುಂತಾದವುಗಳಲ್ಲಿ ಅನಿಲಿನ್ನಿನ ಉಪಯೋಗ ಹೆಚ್ಚು. ಅನಿಲಿನ್ ಒಂದು ವಿಷ ಪದಾರ್ಥ. ಇದಕ್ಕೆ ರಕ್ತದಲ್ಲಿನ ಕೆಂಪುರಕ್ತಕಣಗಳನ್ನು ಹಾಳು ಮಾಡುವ ಶಕ್ತಿಯಿದೆ. ಆದುದರಿಂದ ಇದನ್ನು ತಯಾರಿಸುವ ಮತ್ತು ಇದನ್ನುಪಯೋಗಿಸಿಕೊಂಡು ಇತರ ರಾಸಾಯನಿಕಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತದೆ. (ನೋಡಿ- ಆeóÉೂ-ಸಂಯುಕ್ತಗಳು)

(ಎಚ್.ಎಸ್.ಎಸ್.; ಎ.ಎಸ್.ಆರ್.)

ಉಲ್ಲೇಖನಗಳು

[ಸಂಪಾದಿಸಿ]