ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಥಪುರ್ಣ ರೂಪ
ಗೋಚರ
ಕಲಾಕೃತಿಯಿಂದ ಅದರ ಕಥಾವಸ್ತು, ಮಾನವೀಯ ಭಾವ ಭಾವನೆಗಳು, ಅಂದ ಚೆಂದ ಮುಂತಾದುವನ್ನು ಒಂದು ಪಕ್ಕಕ್ಕೆ ತೆಗೆದಿಟ್ಟರೆ ಅದರಲ್ಲಿ ಉಳಿಯುವುದು ಬರಿ ರೇಖೆಗಳು, ಬಣ್ಣಗಳು, ಅವುಗಳ ಸಂಯೋಜನೆ. ಅವೇ ಆಕೃತಿಯ ಅರ್ಥಪುರ್ಣ ರೂಪ (ಸಿಗ್ನಿಫಿಕೆಂಟ್ ಫಾರಂ), ಸಾರ್ಥಕರೂಪ. ಅವನ್ನು ಕೇವಲ ಆಕೃತಿಯೆಂದೂ ವರ್ಣಗಳೆಂದೂ ಅಸಡ್ಡೆ ಮಾಡಬಾರದು. ಅವೂ ಅವು ಕೂಡಿಕೊಂಡಿರುವ ರೀತಿಯೂ ನಿಜವಾಗಿ ಭಾವಪ್ರಚೋದಕ, ಅರ್ಥಪುರ್ಣ.
19 ನೆಯ ಶತಮಾನದ ಕೊನೆಯ ದಶಕದಲ್ಲಿ ಜಾರ್ಜ್ ಸ್ಯೂರಾ ಈ ತತ್ತ್ವವನ್ನು ತನ್ನ ಕಲೋದ್ಯಮಕ್ಕೆ ಅಡಿಪಾಯವಾಗಿ ಇಟ್ಟುಕೊಂಡಿದ್ದ. ಅನಂತರ ಕ್ಲೈವ್ ಬೆಲ್ 1913 ರಲ್ಲಿ ನಿರ್ದಿಷ್ಟವಚನದಿಂದ ಅದನ್ನೊಂದು ಕಲಾಸೂತ್ರವನ್ನಾಗಿ ಮುಂದಕ್ಕೆ ತಂದ. ರೋಜರ್ಫ್ರೈನಿಂದ ಅದಕ್ಕೆ ವಿಶದೀಕರಣ ಒದಗಿ ಬಂತು.
ಅತ್ಯಾಧುನಿಕ ಕಲಾಮಾರ್ಗ ಜನತೆಗೆ ಗ್ರಾಹ್ಯವಾಗುವುದಕ್ಕೆ ಅದು ಉತ್ತೇಜನವನ್ನೂ ಸಹಾಯವನ್ನೂ ನೀಡಿತು. ಸಾಹಿತ್ಯ ಪ್ರಪಂಚದ ಮೇಲೆ ಅದರ ಪ್ರಭಾವ ತೀರ ಕಡಿಮೆ.