ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಷ್ಲಂಡ್

ವಿಕಿಸೋರ್ಸ್ದಿಂದ

ಉತ್ತರ ಅಮೆರಿಕದ ಈಶಾನ್ಯ ಕೆಂಟುಕಿ ಪ್ರದೇಶದಲ್ಲಿರುವ ಆರಿಗನ್ ಸಂಸ್ಥಾನದ ಜ್ಯಾಕ್ಸನ್ ಕೌಂಟಿಯ ಒಂದು ಪಟ್ಟಣ. ಒಹಾಯೊ ನದಿಯ ದಡದ ಮೇಲಿದೆ. ಜನಸಂಖ್ಯೆ 21,981 (2000). ಬಟ್ಟೆ ಗಿರಣಿಗಳಿವೆ. ಚರ್ಮ, ಪಾದರಕ್ಷೆ, ರಾಸಾಯನಿಕ ವಸ್ತುಗಳು, ಉಕ್ಕು, ಆಹಾರ ಪದಾರ್ಥಗಳು-ಇವೇ ಮುಖ್ಯ ಉತ್ಪನ್ನಗಳು. ಉತ್ತರ ಅಮೆರಿಕದ ಉತ್ತರ ಒಹಾಯೊ, ನೈಋತ್ಯ ಓರೆಗಾನ್, ಪೆನ್ಸಿಲ್ವೇನಿಯ, ಸುಪೀರಿಯರ್ ಸರೋವರದ ಬಳಿಯಲ್ಲಿರುವ ಉತ್ತರ ವಿಸ್ಕಾನ್ಸಿನ್ಗಳಲ್ಲೂ ಇದೇ ಹೆಸರಿನ ಪಟ್ಟಣಗಳಿವೆ.