ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಸ್ಕರ್ ಪುರಸ್ಕಾರ

ವಿಕಿಸೋರ್ಸ್ದಿಂದ

ಈ ಪುರಸ್ಕಾರವನ್ನು ಸಿನಿಮಾರಂಗದ ಅತ್ಯುತ್ತಮ ನಿರ್ದೇಶಕರು, ನಟನಟಿಯರು, ಲೇಖಕರಿಗೆ `ಅಮೆರಿಕನ್ ಅಕ್ಯಾಡೆಮಿ ಮೋಷನ್ ಪಿಕ್ಚರ್ಸ್ ಆಯಂಡ್ ಸೈನ್ಸಸ್’ (AMPAS) ಸಂಸ್ಥೆಯು ನೀಡುತ್ತದೆ. `ಆಸ್ಕರ್ ಕಿರುಪ್ರತಿಮೆ’ಯನ್ನು `ಅಕ್ಯಾಡೆಮಿ ಅವಾರ್ಡ್ ಆಫ ಮೆರಿಟ್’ ಎಂದು ಕರೆಯಲಾಗಿದೆ. ಇದು ಒಂಬತ್ತು ಅಕಾಡೆಮಿ ಪುರಸ್ಕಾರಗಳಲ್ಲಿ ಒಂದಾಗಿದೆ.

ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರದಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗುವುದು. ಇದು ತುಂಬಾ ಪ್ರಾಚೀನವಾದುದು. ಇದರ ಸಂವಾದಿ ಪುರಸ್ಕಾರಗಳೆಂದರೆ (ಸಂಗೀತಕ್ಕೆ) ಗ್ರ್ಯಾಮಿ ಪುರಸ್ಕಾರ, ‘ಟೆಲಿವಿಷನ್’ಗೆ ಎಮ್ಮಿ ಪುರಸ್ಕಾರ ಮತ್ತು (ರಂಗಕ್ಷೇತ್ರಕ್ಕೆ) ಟೋನಿ ಪುರಸ್ಕಾರ.

AMPAS ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿ ಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲ. ಈ ಸಂಸ್ಥೆ ಸಿನಿಮಾ ಉದ್ಯಮದ ಬಗ್ಗೆ ಜನಾಭಿಪ್ರಾಯ ಸುಧಾರಿಸುವಂತೆ ಮಾಡಿ, ಕಾರ್ಮಿಕ ಕಲಹಗಳನ್ನು ನಿವಾರಿಸಲು ನೆರವು ನೀಡುತ್ತದೆ.

ಮೊದಲನೆಯ `ಅಕ್ಯಾಡೆಮಿ ಪುರಸ್ಕಾರ’ ಸಮಾರಂಭವು 1929ರ ಮೇ 16ರಂದು ಹಾಲಿವುಡ್ನ `ಹೊಟೆಲ್ ರೂಸ್ವೆಲ್ಟ್’ನಲ್ಲಿ 270 ಜನ ಪ್ರೇಕ್ಷಕರ ಎದುರು ನಡೆಯಿತು. 84ನೇ ಆಸ್ಕರ್ ಪುರಸ್ಕಾರ ಸಮಾ ರಂಭವು (2011ರ ಚಲನಚಿತ್ರಗಳಿಗೆ ಸಂಬಂಧಿಸಿದ್ದು) 2012ರ ಫೆಬ್ರವರಿ 26ರಂದು ಹಾಲಿವುಡ್ ಆಯಂಡ್ ಹೈಲ್ಯಾಂಡ್ ಸೆಂಟರ್ನಲ್ಲಿ ನಡೆಯಿತು. ಚಲನಚಿತ್ರ ಕ್ಷೇತ್ರದಲ್ಲಿ ಮಹತ್ತ್ವಪುರ್ಣ ಕೊಡುಗೆ ನೀಡಿದ ಗಣ್ಯರು ಇದರ ಸದಸ್ಯರಾಗಿರುವರು. ಇವರು AMPASನ ಆಡಳಿತ ಮಂಡಳಿಯ ಸದಸ್ಯರು. ಅನೇಕ ವರ್ಷಗಳ ಕಾಲ ಸೋಮವಾರ ರಾತ್ರಿ 9 ಗಂಟೆಗೆ (ಪೂರ್ವ ಪೆಸಿಫಿಕ್ ಕಾಲಮಾನ) ನಡೆಯುತ್ತಿದ್ದ ಸಮಾರಂಭವು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು, 1999ರಿಂದ ಈಚೆಗೆ ಭಾನುವಾರಗಳಂದು ರಾತ್ರಿ 8.30 ಗಂಟೆಗೆ ನಡೆಯುತ್ತದೆ.

2012ರಲ್ಲಿ AMPAS ಸಂಸ್ಥೆಯಲ್ಲಿ 5783 ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದಾರೆ. ಇಂಗ್ಲಿಷ್ ಭಾಷೆಯನ್ನು ಬಿಟ್ಟು ಬೇರೆ ಭಾಷೆಯ ಚಿತ್ರಗಳನ್ನು ಈ ಪುರಸ್ಕಾರಕ್ಕೆ ಪರಿಶೀಲಿಸಿರುವುದು ಕಡಿಮೆ. ಇದುವರೆಗೆ ಕೇವಲ ಇತರ ಎಂಟು ಭಾಷೆಯ ಚಿತ್ರಗಳಿಗೆ (ಫ್ರೆಂಚ್, ಸ್ವೀಡಿಷ್, ಇಟ್ಯಾಲಿಯನ್, ಸ್ಪ್ಯಾನಿಷ್, ಚೀನೀ, ಜಪಾನಿ ಮೊದಲಾದವು) ನೀಡಲಾಗಿದೆ. ರಿಚರ್ಡ್ ಅಟೆನ್ಬರೊ ನಿರ್ಮಾಪಕತ್ವದ `ಗಾಂಧಿ’ (1982) ಕ್ರಿಶ್ಚಿಯನ್ ಕಾಲ್ಸನ್ ನಿರ್ಮಾಪಕತ್ವದ `ಸ್ಲಮ್ಡಾಗ್ ಮಿಲಿಯನೇರ್’ ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.