ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂತ ಮಂಡಲ

ವಿಕಿಸೋರ್ಸ್ದಿಂದ
  ಮೂಲದೊಡನೆ ಪರಿಶೀಲಿಸಿ

ಕಾಂತ ಮಂಡಲ

ಒಂದು ಕಾಂತ ಅಭಿವಾಹದ (ಮ್ಯಾಗ್ನೆಟಿಕ್ ಫ್ಲಕ್ಸ್) ರೇಖೆಗಳ ಗಣ ರಚಿಸುವ ಸಂಪೂರ್ಣ ಸಂವೃತ ಪಥ (ಮ್ಯಾಗ್ನೆಟಿಕ್ ಸಕ್ರ್ಯೂಟ್). ವಿದ್ಯುತ್ ಯಂತ್ರಗಳು, ಟ್ರಾನ್ಸ್‍ಫಾರ್ಮರುಗಳು, ವಿದ್ಯುತ್ಕಾಂತಗಳು, ವಿದ್ಯುತ್ಕಾಂತ ಉಪಕರಣಗಳು ಮುಂತಾದವುಗಳಲ್ಲಿ ಕಾಂತ ಬಲ ಕಾಂತವಸ್ತುಗಳಿಂದ ಮಾಡಲ್ಪಟ್ಟ ಭಾಗಗಳಲ್ಲಿ ಪ್ರವಹಿಸಲು ಅವಕಾಶವಿದೆ. ಈ ಭಾಗಗಳಿಗೆ ಕಾಂತದಿಂಡು (ಕೋರ್) ಎಂದು ಹೆಸರು. ದಿಂಡಿನ ಸುತ್ತ ಅಳವಡಿಸಿದ ಸುರುಳಿಗಳ ಮೂಲಕ ವಿದ್ಯುತ್ಪ್ರವಾಹವನ್ನುಂಟುಮಾಡುವುದರಿಂದ ದಿಂಡಿನಲ್ಲಿ ಕಾಂತಬಲಪ್ರವಾಹವಾಗುತ್ತದೆ.  ಮೇಲೆ ಹೇಳಿದ ಉಪಕರಣಗಳನ್ನು ವಿದ್ಯುನ್ಮಂಡಲಗಳಂತೆಯೇ ಪರೀಕ್ಷಿಸಬಹುದು. ಆದ್ದರಿಂದಲೇ ಅವನ್ನು ಸಹ ಕಾಂತಮಂಡಲಗಳೆನ್ನುತ್ತಾರೆ.

 

ಚಿತ್ರ-1

 

ಚಿತ್ರ (1)ರಲ್ಲಿ ಒಂದೇ ಕಾಂತವಸ್ತುವಿನಿಂದ ಮಾಡಿದ ಒಂದು ದಿಂಡನ್ನು ತೋರಿಸಿದೆ. ಅದರ ಒಂದು ಬಾಹುವಿನ ಅಡ್ಡ ಕೊಯ್ತದ ಸಲೆ S1, ಉಳಿದ ಮೂರರ ಅಡ್ಡಕೊಯ್ತದ ಸಲೆ S2 ಆಗಿರಲಿ. ದಿಂಡಿನಲ್ಲಿನ ಕಾಂತ ಅಭಿವಾಹ (ಫ್ಲಕ್ಸ್)  ಆಗಿರಲಿ. ಆದ್ದರಿಂದ ಟ1 ಅಂತರದಲ್ಲಿ ಕಾಂತಾಭಿವಾಹ ಸಾಂದ್ರತೆ  ಮತ್ತು

ಟ2 ಅಂತರದಲ್ಲಿ ಕಾಂತಾಭಿವಾಹ ಸಾಂದ್ರತೆ   ಟ1 ಮತ್ತು ಟ2 ಗಳಲ್ಲಿ ಕಾಂತ ತೀವ್ರತೆ (ಮ್ಯಾಗ್ನೆಟಿಕ್ ಇಂಟೆನ್ಸಿಟಿ)

   ಮತ್ತು

ಇಲ್ಲಿ  ದಿಂಡುವಸ್ತುವಿನ ಕಾಂತಪಾರಗಮ್ಯತೆ (ಪರ್ಮಿಯೆಬಿಲಿಟಿ). ಟ1+ಟ2 ಕಾಂತ ದಾರಿಯಲ್ಲಿ  ಆಗಿದ್ದರೆ  ಎಂದು ತೋರಿಸಬಹುದು.  ಇಲ್ಲಿ ಓ ಸುರುಳಿಯ ಸುತ್ತುಗಳ ಸಂಖ್ಯೆ ಮತ್ತು I ಸುರುಳಿಯಲ್ಲಿನ ವಿದ್ಯುತ್ಪ್ರವಾಹ.  ಆದ್ದರಿಂದ 

   

ಇಲ್ಲಿ ಖ1   ಮತ್ತು ಖ2 ಗಳಿಗೆ ಆಯಾ ಭಾಗಗಳ ಪ್ರತಿಷ್ಟಂಭ (ರೆಲೆಕ್ಟೆನ್ಸ್) ಎಂದು ಹೆಸರು.  ಕಾಂತಾಭಿವಾಹ ಮತ್ತು ಪ್ರತಿಷ್ಟಂಭಗಳ ಗುಣಲಬ್ದಕ್ಕೆ ಕಾಂತವಾಹಕ ಬಲ (ಮ್ಯಾಗ್ನೆಟೋಮೋಟಿವ್ ಪೋರ್ಸ್,mmಜಿ) ಎಂದು ಹೆಸರು. ಇದನ್ನು   ಇರುವ ನೇರದಲ್ಲಿ ನಿರ್ದೇಶಿಸುತ್ತಾರೆ. ಟ2 ಅಂತರದಲ್ಲಿ ಇರುವ mmಜಿ ಅನ್ನು  ಎಂದು ಬರೆಯಬಹುದು. ಈ ಸಮೀಕರಣ ಓಮನ ನಿಯಮದಂತೆಯೇ ಕಾಣುವುದರಿಂದ ಇದಕ್ಕೆ ಕಾಂತ ಓಮನ ನಿಯಮ ಎಂದು ಹೆಸರು.

 

ಚಿತ್ರ-2

 

ಮೇಲಿನ ಕಾಂತಮಂಡಲದ ಒಟ್ಟು mmಜಿ

   

ಕಾಂತಮಂಡಲದ (mmಜಿ) ವಿದ್ಯುನ್ಮಂಡಲದ ವಿದ್ಯುದ್ವಾಹಕ ಬಲಕ್ಕೆ (ಎಲೆಕ್ಟ್ರೊಮೋಟಿವ್ ಪೋರ್ಸ್, emಜಿ) ಸಮಾನವಾಗಿಯೂ ಕಾಂತಾಭಿವಾಹ () ವಿದ್ಯುತ್ಪ್ರವಾಹಕ್ಕೆ ಸಮಾನವಾಗಿಯೂ ಪ್ರತಿಷ್ಟಂಭ (ಖ) ವಿದ್ಯುತ್‍ರೋಧತ್ವಕ್ಕೆ ಸಮಾನವಾಗಿಯೂ ಇವೆ. ವಿದ್ಯುನ್ಮಂಡಲಗಳಲ್ಲಿರುವಂತೆಯೇ ಕಾಂತ ಮಂಡಲಗಳಿಗೂ ಕಿರ್ಚಾಫನ ನಿಯಮಗಳನ್ನು ಹೀಗೆ ನಿರೂಪಿಸಬಹುದು :

(1) ಕಾಂತಮಂಡಲದ ಸಂಪಾತಬಿಂದುಗಳಲ್ಲಿ (ನೋಡ್ಸ್) ಕಾಂತಾಭಿವಾಹ ಸೊನ್ನೆ. ಅಂದರೆ ಚಿತ್ರ (2)ರಲ್ಲಿ ಸಂಪಾತಬಿಂದು (1)ರಲ್ಲಿ .

(2) ಒಂದು ಕಾಂತಮಂಡಲದ ಸುತ್ತ mmಜಿ  ಗಳ ಬೀಜಮೊತ್ತ ಆ ಕಾಂತ ದಾರಿಯಲ್ಲಿರುವ ಬೇರೆ  ಬೇರೆ mmಜಿ ಗಳ ಮೊತ್ತ.

ಅಂದರೆ ಚಿತ್ರ (2) ರ 1,2,3,4,1 ಸುತ್ತು ದಾರಿಯಲ್ಲಿ  

 

(ಕೆ.ಜಿ.)