ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಶ್ಮೀರಿ ಭಾಷೆ

ವಿಕಿಸೋರ್ಸ್ದಿಂದ
    ಮೂಲದೊಡನೆ ಪರಿಶೀಲಿಸಿ

ಕಾಶ್ಮೀರಿ ಭಾಷೆ

 ಕಾಶ್ಮೀರ ರಾಜ್ಯದಲ್ಲಿ ಮತ್ತು ಜಮ್ಮು-ಕಾಶ್ಮೀರ ಪ್ರದೇಶದ ಸುತ್ತಮುತ್ತಣ ಭಾಗಗಳಲ್ಲಿ ಬಳಕೆಯಲ್ಲಿರುವ ಭಾಷೆ. ಜಮ್ಮು-ಕಾಶ್ಮೀರ ಪ್ರದೇಶ ಭಾರತದ ಉತ್ತರ ಗಡಿಯಲ್ಲಿದ್ದು ಅದರ ಗಡಿ ಆಫ್‍ಘಾನಿಸ್ತಾನ, ರಷ್ಯ ಮತ್ತು ಚೀನಗಳನ್ನು ಸ್ಪರ್ಶಿಸುತ್ತದೆ. ಇದರ ದಕ್ಷಿಣದಲ್ಲಿ ಪಂಜಾಬ್ ಮತ್ತು ಪೂರ್ವದಲ್ಲಿ ಟಿಬೆಟ್ ಇವೆ. ಭಾರತದ ಜನಸಂಖ್ಯೆಯ ಸೇಕಡಾ 0.81 ಈ ಗಡಿ ಪ್ರದೇಶದಲ್ಲಿದೆ. ಕಾಶ್ಮೀರೀ ಮಾತಾಡುವ ಜನರು ಪಶ್ಚಿಮ ಪಾಕಿಸ್ತಾನದಲ್ಲಿಯೂ ಇದ್ದಾರೆ. ಆದರೆ ಅವರ ಸಂಖ್ಯೆ ತಿಳಿದಿಲ್ಲ. 1911 ಮತ್ತು 1961ನೆಯ ಇಸವಿಯ ಜನಗಣತಿಯ ಆಧಾರದ ಮೇಲೆ ಕಾಶ್ಮೀರಿ ಮಾತಾಡುವವರ ಸಂಖ್ಯೆ 1,195,902 ರಿಂದ 1,959,115ರ ವರೆಗೆ ಇರಬಹುದೆಂದು ಹೇಳಬಹುದು. ಭಾರತ ಮತ್ತು ಪಾಕಿಸ್ತಾನದಿಂದ ಸರಿಯಾದ ದಾಖಲೆಗಳು ಸಿಗುವ ವರೆಗೆ ಕಾಶ್ಮೀರಿ ಮಾತಾಡುವವರ ಸರಿಯಾದ ಸಂಖ್ಯೆಯನ್ನು ನಿರ್ಧರಿಸುವುದು ಕಷ್ಟ.

 ಕಾಶ್ಮೀರದ ನಿವಾಸಿಗಳು ತಮ್ಮ ಭಾಷೆಯನ್ನು ಕಾಶುರ್ ಎಂದೂ ತಮ್ಮ ರಾಜ್ಯವನ್ನು ಕಶೀರ್ ಎಂದೂ ಕರೆಯುತ್ತಾರೆ. ಹಿಂದಿ, ಉರ್ದು ಮುಂತಾದ ಭಾರತೀಯ ಭಾಷೆಗಳಲ್ಲಿ ಕಾಶ್ಮೀರೀ ಅಥವಾ ಕಶ್ಮೀರೀ ಎಂಬ ಶಬ್ದ ಉಪಯೋಗದಲ್ಲಿದೆ. ಆಂಗ್ಲಭಾಷೆಯಲ್ಲಿ ಇದನ್ನು ಕ್ಯಾಶ್‍ಮೀರಿ, ಕಶ್ಚೆಮಿರಿ ಮುಂತಾದ ಹಲವಾರು ರೀತಿಗಳಲ್ಲಿ ಬರೆಯುತ್ತಾರೆ.

 ಕಾಶ್ಮೀರೀ ಮತ್ತು ದಾರ್ದಿಕ್ ಪರಿವಾರ: ದರ್ದ ಎನ್ನವ ಪದಕ್ಕೆ ತನ್ನದೇ ಆದ ಇತಿಹಾಸವಿದೆ. ಪುರಾಣಗಳಲ್ಲಿ, ಕಲ್ಹಣನ ರಾಜತರಂಗಿಣಿಯಲ್ಲಿ ಇದರ ಬಗ್ಗೆ ಉಲ್ಲೇಖವಿದೆ. ಸಂಸ್ಕøತದಲ್ಲಿ ದರ್ದ ಎನ್ನುವ ಪದದ ಅರ್ಥ ಪರ್ವತ ಎಂದು. ದರ್ದಿಸ್ತಾನದ ಹೆಚ್ಚಿನ ಪ್ರದೇಶಗಳು ಪರ್ವತಮಯವಾಗಿವೆ. ಗ್ರಿಯರ್ಸನ್ನನ ಭಾರತೀಯ ಭಾಷೆಗಳ ಸರ್ವೇಕ್ಷಣೆ ಮತ್ತು ಇತರ ಕೆಲವು ಗ್ರಂಥಗಳಲ್ಲಿ ದಾರ್ದಿಕ್ ಭಾಷೆಗಳಿಗೆ ಪಿಶಾಚ ಭಾಷಿಗಳು ಎನ್ನುವ ಪದವನ್ನು ಉಪಯೋಗಿಸಿದೆ. ಈ ಸಂದರ್ಭದಲ್ಲಿ ಗ್ರಿಯರ್ಸನ್ನನ ಈ ಕೆಳಗಿನ ಮಾತುಗಳನ್ನು ಗಮನಿಸಬಹುದು:

 'ಭಾರತದ ಪುರಾಣಗಳಲ್ಲಿ ಪಿಶಾಚ ಎಂಬ ಶಬ್ದ ನರಭಕ್ಷಕ ರಾಕ್ಷಸ ಎಂಬ ಅರ್ಥವನ್ನು ಸೂಚಿಸುತ್ತದೆ. ಆದರೆ ಈ ಭಾಷೆಯನ್ನಾಡುವ ಕೆಲವರು ಇದಕ್ಕೆ ಅಪವಾದಸ್ವರೂಪರಾಗಿದ್ದಾರೆ. ಇಷ್ಟಾದರೂ ಈ ಹೆಸರೇ ಹೆಚ್ಚು ಜನರಿಂದ ಸ್ವೀಕೃತವಾಗಿವೆ. ಈ ಸಂದರ್ಭದಲ್ಲಿ ಪಿಶಾಚ ಭಾಷೆ ಮಾತಾಡುವವರೆಲ್ಲ ಪಿಶಾಚಿಯ ಸಂತತಿಯವರಲ್ಲ ಎಂದು ಹೇಳಬೇಕಾಗುತ್ತದೆ'.

 ದಾರ್ದೀಕ್ ಪರಿವಾರವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು- ಕಾಫಿರ್ ವರ್ಗ, ಖೋವಾರ್ ವರ್ಗ ಮತ್ತು ದರ್ದ ವರ್ಗ. ಇವನ್ನು ಪುನಃ ಈ ರೀತಿಯಾಗಿ ವರ್ಗೀಕರಿಸಬಹುದು.

 ಕಾಫಿರ್ ವರ್ಗ: 1 ಬಶ್‍ಗಲಿ (ಕತಿ) 2 ವೈ ಅಲಾ (ವೈ) 3 ವಸಿ ವೆರಿ (ವೆರೋನ್) 4 ಅಶ್‍ಕುಂದ್ 5 ಕಲಾಶಪಶ 6 ಗೊವಾರ್ ಬತಿ (ನರ್‍ಸಾತಿ) 7 ಪಶಯೀ (ಲಘುಮಾನಿ, ದೇಘಾನೀ) 8 ಬಶ್‍ಕರಿಕ್ 9 ತಿರಹಿ 10 ಪುಸುನ್ 11 ಗುಜರಿ 12 ವೈಗಲಿ 19 ಜೊಂಜಿಗಲಿ.

 ಖೋವಾರ್ ವರ್ಗ 1 ಚಿತ್ರಲಿ 2 ಚತ್ರಾರೀ 3 ಅರ್‍ನಿಯ.

 ದರ್ದ್ ವರ್ಗ 1 ಶಿನ 2 ಕಶ್ಮೀರಿ (ಕಶುರ್) ಕೋಹಿಸ್ತಾನೀ.

 ದರ್ದ್ ಪರಿವಾರದಲ್ಲಿ ಕಶ್ಮೀರಿಯ ಸ್ಥಾನ ಮತ್ತು ಅದರ ಉತ್ಪತ್ತಿಯ ಬಗ್ಗೆ ಚರ್ಚೆ ನಡೆಯುತ್ತಿದ್ದು ವಿದ್ವಾಂಸರು ಇನ್ನೂ ಒಂದು ನಿರ್ಧಾರಕ್ಕೆ ಬಂದಿಲ್ಲ. ಇದರ ಬಗ್ಗೆ ವಾದವಿವಾದಗಳನ್ನು ಪ್ರಾರಂಭಿಸಿದ ಗಿಯರ್ಸನ್ ಭಾಷಾಶಾಸ್ತ್ರ ದೃಷ್ಟಿಯಿಂದ ಕಾಶ್ಮಿರೀ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದಿದೆಯೆಂದೂ ತನ್ನ ರಚನೆಯಲ್ಲಿ ಅದು ದಾರ್ದಿಕ್ ಪರಿವಾರದ ಲಕ್ಷಣಗಳನ್ನು ಅಳವಡಿಸಿಕೊಂಡಿದೆಯೆಂದೂ ಆದರೆ ಹಿಂದೀ ಪಂಜಾಬೀ ಮುಂತಾದ ಆರ್ಯ ಭಾಷೆಗಳ ವೈಶಿಷ್ಟ್ಯಗಳನ್ನೂ ಪಡೆದಿದೆಯೆಂದೂ ಅಭಿಪ್ರಾಯಪಡುತ್ತಾನೆ. ಚಟರ್ಜಿಯವರು ಈ ರೀತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಗೊಳಿಸಿದ್ದಾರೆ. 'ಕಾಶ್ಮೀರೀ ಭಾಷೆ ತನ್ನ ಮೂಲಭೂತವಾದ ರಚನೆಯ ದೃಷ್ಟಿಯಿಂದ ಆರ್ಯಭಾಷೆಯ ದಾರ್ದಿಕ್ ವರ್ಗಕ್ಕೆ ಸೇರಿದೆ. ಪ್ರಾಯಶಃ ಕ್ರಿ.ಪೂ. 1000 ಕ್ಕಿಂತಲೂ ಪೂರ್ವದಲ್ಲಿ ಭಾರತಕ್ಕೆ ಬಂದ ಆರ್ಯರ ಒಂದು ಗುಂಪು ಋಗ್ವೇದದ ಭಾಷೆಯನ್ನು ಹೋಲುವ ಒಂದು ಆಡುನುಡಿಯನ್ನು ಮಾತಾಡುತ್ತಿದ್ದಿರಬೇಕು. ಆ ಗುಂಪು ಕಾಶ್ಮೀರ ಮತ್ತು ಸುತ್ತಮುತ್ತಣ ಪರ್ವತ ಪ್ರದೇಶದಲ್ಲಿ ನೆಲೆಸಿರಬೇಕು. ವೇದಕಾಲದ ಅನಂತರ ಸಂಸ್ಕøತ ಹಾಗೂ ಪ್ರಾಕೃತವನ್ನಾಡುವ ಆರ್ಯರು ಕಾಶ್ಮೀರದಲ್ಲಿ ಮತ್ತು ಹಿಮಾಲಯ ಪ್ರದೇಶದಲ್ಲಿ ಬಂದು ನೆಲಸಿರಬೇಕು. ಹೀಗಾಗಿ ಈ ದಾರ್ದಕ್ ಪರಿವಾರದ ಜನರ ಹಾಗೂ ಭಾಷೆಯ ಮೇಲೆ ಆರ್ಯರ ಮತ್ತು ಅವರ ಭಾಷೆಯ ಪ್ರಭಾವ ಎಷ್ಟರ ಮಟ್ಟಿಗೆ ಬಿದ್ದಿದೆ ಎಂದರೆ ಈ ಕಾಶ್ಮೀರೀ ಭಾಷೆ ದಾರ್ದಿಕ್ ತಳಹದಿಯ ಮೇಲೆ ಕಟ್ಟಿದ ಆರ್ಯಭಾಷೆಯ ಶಿಖರ ಎನ್ನಬಹುದು'. ಚಟರ್ಜಿಯವರ ಈ ಅಭಿಪ್ರಾಯದ ಬಗ್ಗೆ ಬರೆಯುತ್ತ ಕಚ್ರು ಅವರು 'ಈ ಆರ್ಯ ಭಾಷೆಯ ಶಿಖರ ಎಂಬುದಕ್ಕೆ ಭಾಷಾಶಾಸ್ತ್ರ ದೃಷ್ಟಿಯಿಂದ ಸಾಧುವಾದ ಉತ್ತರ ಇನ್ನೂ ಸಿಗಲಿಲ್ಲ. ಈ ದಿಶೆಯಲ್ಲಿ ಸಾಕಷ್ಟು ಸಂಶೋಧನೆ ನಡೆದಿಲ್ಲ' ಎನ್ನುತಾರೆ.

 1911ರ ಕಾಶ್ಮೀರ ಜನಗಣತಿಯ ವರದಿ ಹೀಗಿದೆ-ಕಾಶ್ಮೀರಿ ಈವರೆಗೆ ಸಂಸ್ಕøತ ಜನ್ಯವೆಂದು ಪರಿಗಣಿಸಲ್ಪಟ್ಟಿದ್ದರೂ ಹೊಸ ಮಾದರಿಯ ವರ್ಗೀಕರಣದಂತೆ ಶಿಣಖೋವಾರ್ ಭಾಷೆಗಳ ಜೊತೆಗಿದನ್ನು ಸೇರಿಸಲಾಗಿದೆ. ಅದರ ಸ್ಥಳೀಯ ಜನರ ಅಭಿಪ್ರಾಯದಂತೆ ಅದು ಸಂಸ್ಕøತ ಜನ್ಯವೇ. ಕಾಶ್ಮೀರ ಇಸ್ಲಾಂ ರಾಜ್ಯವಾಗಿ ಪರಿವರ್ತನೆಯಾದಲ್ಲಿನವರೆಗೆ ಶಾಸ್ತ್ರವೇತ್ತರಾದ ಬ್ರಾಹ್ಮಣರಿಂದ ತುಂಬಿದ್ದುದರಿಂದ ಈ ವಾದ ಕೂಡ ವಿಚಾರಾರ್ಹವಾಗಿದೆ.

 ಈ ವಾದವನ್ನು ವಿರೋಧಿಸುತ್ತ ಗ್ರಿಯರ್‍ಸನ್ ಕಾಶ್ಮೀರಿ ಭಾಷೆಯ ಕೆಲವು ಲಕ್ಷಣಗಳನ್ನೂ ಕೊಟ್ಟು ಈ ವಾದವನ್ನು ವೈಜ್ಞಾನಿಕವಾಗಿ ವಿವೇಚಿಸಬೇಕೆಂದೂ ಉದ್ರೇಕದಿಂದ ಯೋಚಿಸಬಾರದಿಂದೂ ಹೇಳಿದ್ದಾನೆ (1916). ಶಿಣ-ಖೋವಾರ್ ವರ್ಗವನ್ನೂಳಗೊಂಡ ಪಿಶಾಚ ಭಾಷೆಗಳು ಭಾರತದ ಸಂಸ್ಕøತ ಭಾಷೆ ಮತ್ತು ಪಶ್ಚಿಮದ ಇರಾನಿ ಭಾಷೆಗಳಿಗೆ ಮಧ್ಯವರ್ತಿಗಳಾಗಿವೆ. ಹೀಗಾಗಿ ಅವುಗಳಲ್ಲಿ ಸಂಸ್ಕøತ ಮತ್ತು ಇರಾನಿ ಭಾಷೆಗಳಲ್ಲಿರುವ ಲಕ್ಷಣಗಳಿವೆ. ಅಲ್ಲದೆ ತಮ್ಮದೇ ಆದ ವೈಶಿಷ್ಟ್ಯಗಳೂ ಅವುಗಳಲ್ಲಿವೆ. ಕೆಲವು ವಿಚಾರಗಳಲ್ಲಿ ಇವು ಇರಾನಿ ಭಾಷಾ ಪರಿವಾರವನ್ನು ಹೋಲುತ್ತವೆ. ಕಾಶ್ಮೀರೀ ಭಾಷೆ ಪಿಶಾಚ ಭಾಷೆಯ ಎಲ್ಲ ಲಕ್ಷಣಗಳನ್ನೂ ಪಿಶಾಚ ಮತ್ತು ಇರಾನಿ ಭಾಷೆಯ ಸಾಮಾನ್ಯ ಲಕ್ಷಣಗಳನ್ನೂ ಒಳಗೊಂಡಿದೆ. ಇದು ಗ್ರಿಯರ್‍ನ್ನನ ಅಭಿಪ್ರಾಯ.

 ಗ್ರಿಯರ್‍ಸನ್ನನ ಮತದಂತೆ ಕಾಶ್ಮೀರಿ ಭಾಷೆಯನ್ನು ಆರ್ಯ ಭಾಷೆಗಳಿಂದ ಬೇರ್ಪಡಿಸುವ ಲಕ್ಷಣಗಳು ಈ ಕೆಳಗಿನಂತಿವೆ.

 1 ಸಘೋಷ ಮಹಾಪ್ರಾಣ ಸ್ಪರ್ಶಗಳ ಅಭಾವ

 2 ಮೂರ್ಧನ್ಯ ಮತ್ತು ದಂತ್ಯ ಧ್ವನಿಗಳ ಪಲ್ಲಟನೆ.

 3 ಸ್ವರ ಮತ್ತು ಅಂತಸ್ಥಗಳ ಪ್ರಭಾವದಿಂದ ವ್ಯಂಜನ ವ್ಯತ್ಯಯ

 4 ಪದಾಂತ ಸ್ಪರ್ಶಗಳ ಮಹಾಪ್ರಾಣೀಕರಣ

 5 ಪ್ರಾಕೃತದಿಂದ ಎರವಲು ಪಡೆದ ಶಬ್ದಗಳಲ್ಲಿ ಧ್ವನಿಪರಿವರ್ತನೆ ಆಗದಿರುವಿಕೆ

 6 ಎರಡು ಸ್ವರಗಳ ಮಧ್ಯದಲ್ಲಿ ತ ಕಾರ ಲೋಪವಾಗದಿರುವಿಕೆ

 7 ನ ಕಾರದ ಲೋಪ

 8 ವ್ಯಂಜನಕ್ಕೆ ಪರವಾಗಿರುವ ರೇಫ ಲೋಪವಾಗದಿರುವುದು.

 9 ಅನಿಶ್ಚಯ ಸೂಚಕವಾದ ಆ ಪ್ರತ್ಯಯ

 10 ಪರಪ್ರತ್ಯಯಗಳ ಪ್ರಾಧಾನ್ಯ

 11 ಪಿಶಾಚ ಭಾಷೆಯ ಸಂಖ್ಯಾವಾಚಕಗಳು

 12 ನಿರ್ದೇಶಕ ಸರ್ವನಾಮದ ಮೂರು ರೀತಿಯ ಪ್ರಭೇದಗಳೂ

 13 ಭೂತಕಾಲದಲ್ಲಿ ಮೂರು ರೀತಿಯ ಪ್ರಭೇದಗಳು

 14 ವಿಶಿಷ್ಟವಾದ ಶಬ್ದಕ್ರಮ

 

 ಕಾಶ್ಮೀರೀ ಶಬ್ದಭಂಡಾರದಲ್ಲಿ ಬೇಕಾದಷ್ಟು ಸಂಸ್ಕøತ ಶಬ್ದಗಳಿರುವುದರಿಂದ ಅದನ್ನು ಸಂಸ್ಕøತಜನ್ಯ ಭಾಷೆಯೆಂದು ಜನ ತಿಳಿಯುತ್ತಾರೆ. ಈ ವಿಚಾರವಾಗಿ ಗ್ರೀಯರ್‍ಸನ್ ಹೀಗೆ ಹೇಳುತ್ತಾನೆ: 'ಕೊನೆಗೆ ನಾವು ಶಬ್ದಭಂಡಾರಕ್ಕೆ ಬರುತ್ತೇವೆ. ಈ ಒಂದು ಕಾರಣದಿಂದಾಗಿಯೇ ಕಾಶ್ಮೀರಿ ಸಂಸ್ಕøತಜನ್ಯ ಎಂಬುದನ್ನು ಅಲ್ಲಗಳೆಯುವುದು ಕಷ್ಟವಾಗುತ್ತದೆ. ಆದರೆ ಶಬ್ದಸಂಪತ್ತಿನ ಆಧಾರದ ಮೇಲೆ ಭಾಷೆಗಳನ್ನು ವರ್ಗೀಕರಿಸುವುದಿಲ್ಲ. ಭಾಷೆಯಲ್ಲಿ ಬಹುಕಾಲ ನಿಲ್ಲುವಂಥ ಮತ್ತು ಎರವಲು ಪಡೆಯದಂಥ ನಿತ್ಯಜೀವನದ ಬಳಕೆಯ ಪದಗಳು ಇತ್ಯಾದಿ- ಶಿಣ ಭಾಷೆಯ ಪದಗಳಿಗೆ ಸಮಾನವಾಗಿದ್ದು ಪಿಶಾಚ ಪರಿವಾರಕ್ಕೆ ಸೇರಿದವುಗಳಾಗಿವೆ. ಕಾಶ್ಮೀರೀ ಭಾಷೆ ದಾರ್ದಿಕ್ ಪರಿವಾರದ ಪಿಶಾಚ ವರ್ಗಕ್ಕೆ ಸೇರಿದ ಒಂದು ಮಿಶ್ರಿತ ಭಾಷೆಯಾಗಿದೆ. ಭಾರತೀಯ ಸಾಹಿತ್ಯ ಹಾಗೂ ಸಂಸ್ಕøತಿಯಿಂದ ಪ್ರಭಾವಿತವಾಗಿ ಅದರ ಶಬ್ದಭಂಡಾರ ಸಂಸ್ಕøತ ಜನ್ಯಪದಗಳಿಂದ ತುಂಬಿದೆ. ಆದರೆ ಮೂಲತ: ಅದರ ಶಬ್ದಗಳು, ಧ್ವನಿವ್ಯವಸ್ದೆ, ವಾಕ್ಯರಚನೆ ಮುಂತಾದವುಗಳೆಲ್ಲ ಪಿಶಾಚ ವರ್ಗಕ್ಕೆ ಸೇರಿದವಾಗಿವೆ'.

 ಕಾಶ್ಮೀರೀ ಭಾಷೆಯನ್ನು ಆರ್ಯ ಹಾಗೂ ದಾರ್ದಿಕ್ ಪರಿವಾರದೊಡನೆ ತುಲನಾಕ್ಮಕವಾಗಿ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾಗಿದೆ. ಭಾವನಾತ್ಮಕವಾಗಿ ವಿವೇಚಿಸುವುದನ್ನು ಬಿಟ್ಟು ವೈಜ್ಞಾನಿಕವಾಗಿ ಪರಿಶೀಲಿಸುವವರಿಗೆ ಗ್ರಿಯರ್ಸನ್ನನ ಅಭಿಪ್ರಾಯವನ್ನೇ ನಾವು ಅನುಮೋದಿಸಬೇಕು.

ಕಾಶ್ಮೀರಿಯ ಉಪಬಾಷೆಗಳು: ಕಾಶ್ಮೀರಿಯ ಉಪಬಾಷೆಗಳ ಬಗ್ಗೆ ಖಚಿತವಾದ ಕ್ಷೇತ್ರ ಪರಿವೀಕ್ಷಣೆ ಇನ್ನೂ ನಡೆದಿಲ್ಲ. ಸದ್ಯಕ್ಕೆ ನಮಗೆ ಸಿಕ್ಕಿದ ಪುರಾವೆಗಳು ಗ್ರಿಯರ್‍ಸನ್ನನ ಗ್ರಂಥದಲ್ಲಿವೆ. ಆದರೆ ಅವು ಅಷ್ಟು ಖಚಿತವಾಗಿಲ್ಲ. ಕಾಶ್ಮೀರಿಯ ಉಪಭಾಷೆಗಳನ್ನು ಮುಖ್ಯವಾಗಿ ಭೌಗೋಲಿಕ ಹಾಗೂ ಸಾಮಾಜಿಕವಾಗಿ ವರ್ಗೀಕರಿಸಬಹುದು.

 ಭೌಗೋಲಿಕ ಉಪಭಾಷೆಗಳು: 1961ರ ಜನಗಣತಿಯ ಪ್ರಕಾರ ಈ ಕೆಳಗಿನ ಭೌಗೋಲಿಕ ಉಪಭಾಷೆಗಳಿವೆ-ಬುಂಜ್ ವಾಲಿ (550) ಕಿಷ್ಟ್‍ವಾರೀ (11,633) ಪೊಗುಲೀ (9,508) ಶಿರಾಜೀ ಕಾಶ್ಮೀರೀ (19,978) ಕಘನಿ (152) ಕೊಹಿಸ್ತಾನೀ (81). ಗ್ರಿಯರ್‍ಸನ್ ಕಷ್ಟವಾರೀ ಎಂಬುದು ಮಾತ್ರ ಕಾಶ್ಮೀರೀ ಭಾಷೆಯ ಪ್ರಧಾನವಾದ ಉಪಭಾಷೆಯೆಂದೂ ಬೇರೆ ಪೊಗುಲೀ, ಸಿರಾಜೀ, ರಾಮ್‍ಬನಿ ಮುಂತಾದುವು ಕಾಶ್ಮೀರಿ ಮತ್ತು ಲಹಂಡಾ ಭಾಷೆಗಳ ಮಿಶ್ರಿತ ರೂಪಗಳೆಂದೂ ಅಭಿಪ್ರಾಯಪಡುತ್ತಾನೆ. ಗ್ರಾಮೀಣ ಮತ್ತು ಧಾರ್ಮಿಕ ವ್ಯತ್ಯಾಸಗಳನ್ನು ಬಿಟ್ಟರೆ ಕಷ್ಟವಾರೀ ಎಂಬುದು ಮಾತ್ರ ಮುಖ್ಯ ಉಪಭಾಷೆಯೆಂದು ಮುಂದಿನ ಸಂಶೋಧನೆಗಳು ತೋರಿಸಬಹುದು. ಇತರ ಭಾಷೆಗಳೆಲ್ಲ ಕಾಶ್ಮೀರೀ ಮತ್ತು ಪಂಜಾಬಿ ಮುಂತಾದ ಆಸುಪಾಸಿನ ಭಾಷೆಗಳ ಕಲಸುಮೇಲೋಗರ ಎನ್ನಬಹುದು.

 ಸಾಮಾಜಿಕ ಉಪಭಾಷೆಗಳುಳ್ಳ ಸಾಮಾಜಿಕ ಪ್ರಭೇದಗಳಲ್ಲಿ ಹಿಂದೂ ಕಾಶ್ಮೀರೀ ಮತ್ತು ಮುಸ್ಲಿಂ ಕಾಶ್ಮೀರೀ ಇವು ಮುಖ್ಯವಾದವುಗಳು. ಸಾಹಿತ್ಯದಲ್ಲಿಯೂ ಇವುಗಳ ಪ್ರತ್ಯೇಕತೆ ಕಂಡುಬರುತ್ತದೆ. ಜಾತಿ ಹಾಗೂ ಧರ್ಮನಿಷ್ಠವಾದ ಈ ಉಪಭಾಷೆಗಳ ಧ್ವನಿಮಾಗಳ ವಿತರಣೆಯಲ್ಲಿಯೂ ಆವೃತ್ತಿಯಲ್ಲಿಯೂ ವ್ಯತ್ಯಾಸಗಳಿವೆ. ಹಾಗೆಯೇ ಶಬ್ದಸಂಪತ್ತಿನಲ್ಲಿಯೂ ಶಬ್ದರಚನೆಯಲ್ಲಿಯೂ ಕೆಲವು ವ್ಯತ್ಯಾಸಗಳಿವೆ. ಹಿಂದೂ ಕಾಶ್ಮೀರಿ ಸಂಸ್ಕøತದಿಂದಲೂ ಮುಸ್ಲಿಂ ಕಾಶ್ಮೀರಿ ಪರ್ಶಿಯನ್ ಅರಬ್ಬಿಯಿಂದಲೂ ಶಬ್ದಗಳನ್ನು ಎರವಲು ಪಡೆದಿವೆ.

 ಈ ವ್ಯತ್ಯಾಸ ಕೆಲವು ಸಾಹಿತ್ಯರೂಪಗಳಲ್ಲಿಯೂ ಸರ್ಕಾರಿ ಶೈಲಿಯಲ್ಲಿಯೂ ಕಂಡುಬರುವುದಿಲ್ಲ. ಈ ಶೈಲಿ ಧಾರ್ಮಿಕ ಉಪಭಾಷೆಗಳ ವ್ಯತ್ಯಾಸ ಶಬ್ದ ಸಂಪತ್ತಿನಲ್ಲಿ ಮಾತ್ರ ಎಂದು ಕಂಡುಬರಬಹುದು.

 ಪ್ರಭೇದಗಳ ಧ್ವನಿ ವ್ಯವಸ್ಥೆ ಒಂದೇ ರೀತಿಯಾಗಿದ್ದರೂ ಈ ಎರಡು ಸಾಮಾಜಿಕ ಪ್ರಭೇದಗಳ ಮುಖ್ಯ ವ್ಯತ್ಯಾಸಗಳನ್ನು ಈ ರೀತಿ ಸಂಗ್ರಹಿಸಬಹುದು: ಹಿಂದೂ ಕಾಶ್ಮೀರಿಯರ ರ ಕಾರ ಮುಸ್ಲಿಂ ಕಾಶ್ಮೀರಿಯ ಡ ಕಾರವಾಗಿದೆ. ಉದಾ: ಹಿಂದೂ ಕಾಶ್ಮೀರಿಯ ಗುರ್=ಕುದರೆ, ಯೋರ್=ಇಲ್ಲಿ, ಹೋರ್= ಅಲ್ಲಿ ಮುಂತಾದವು ಮುಸ್ಲಿಂ ಕಾಶ್ಮೀರಿಯಲ್ಲಿ ಗುಡ್, ಯೋಡ್, ಮತ್ತು ಹೋಡ್ ಆಗಿವೆ. ಹಿಂದೂ ಕಾಶ್ಮೀರಿಯ ಉಚ್ಚ-ಮಧ್ಯಸ್ವರ ಮುಸ್ಲಿಂ ಕಾಶ್ಮೀರಿಯಲ್ಲಿ ಉಚ್ಚ-ಅಗ್ರಸ್ವರವಾಗಿವೆ. ಹಿಂದೂ ಕಾಶ್ಮೀರಿ ರ್‍ಖ್=ಸಾಲು, ಟ್‍ಖ್=ಓಡು, ಖಾನ್=ಸಿಂಬಳ ಇವು ಮುಸ್ಲಿಂ ಕಾಶ್ಮೀರಿಯಲ್ಲಿ ರಿಖ್, ಟಿಖ್, ಖಿನ್ ಆಗಿವೆ. ಹಿಂದೂ ಕಾಶ್ಮೀರಿಯ ಮಧ್ಯ ಸ್ವರ ಮುಸ್ಲಿಂ ಕಾಶ್ಮೀರಿಯಲ್ಲಿ ಮಧ್ಯ-ನಿಮ್ನ ಸ್ವರವಾಗಿದೆ. ದಹ್ (ಜeh)

 

ಹತ್ತು, ಗಾಠ್ (gಳಿ : ಣh) ಹದ್ದು ಇವು ಮುಸ್ಲಿಂ ಕಾಶ್ಮೀರಿಯಲ್ಲಿ ದಹ್ (ಜಚಿh)

 

ಗಾಠ್ (g್ಭ : ಣh) ಇತ್ಯಾದಿ ಆಗುತ್ತವೆ. ಮಧ್ಯ ಸ್ವರ ಪಶ್ಚಸ್ವರವಾದುದಕ್ಕೆ ಉದಾಹರಣೆ ಹಿಂದೂ ಕಾಶ್ಮೀರಿಯ ಮಾಜ್ (m : ರಿ)= ತಾಯಿ ಮುಸ್ಲಿಂ ಕಾಶ್ಮೀರಿ ಅರಬ್ಬೀ ಪಾರ್ಸಿಯಿಂದಲೂ ಎರವಲು ಪಡೆದಿದ್ದರೂ ವ್ಯಾಪಾರ, ನ್ಯಾಯಾಂಗ ಮುಂತಾದವುಗಳ ಶೈಲಿಯಲ್ಲಿ ಎರಡು ಪ್ರಭೇದಗಳಿಗೂ ಸಮನಾದ ಶಬ್ದಗಳಿವೆ. ಆದರೆ ಆಡುಮಾತಿನಲ್ಲಿ ಹಿಂದೂ ಕಾಶ್ಮೀರಿ ಮತ್ತು ಮುಸ್ಲಿಂ ಕಾಶ್ಮೀರಿಯ ಶಬ್ದಭಂಡಾರದಲ್ಲಿ ತುಂಬ ವ್ಯತ್ಯಾಸಗಳಿವೆ.

ಂದೂ ಕಾಶ್ಮೀರಿ

ಅರ್ಥ

ಮುಸ್ಲಿಂ ಕಾಶ್ಮೀರಿ

ಕ್ರೂz

ಕೋಪ

ಗೋಸ್

Uಂಡುನ್

ಮದುವೆ ನಿಶ್ಚಿತಾರ್ಥ

ನಿಶಾನ್

ಖೋಸ್

ಲೋಟ

ಪಾಲ್

ನೆನಿ

ಮಾಂಸ

ಹೊಕಿ

ಸೊgU

ಸ್ವರ್ಗ

ಅSತಾಬ್

zರ್‍ವi

ZsÀರ್ಮಾ

ದಿಲ್

 

 ಧ್ವನಿವಿಜ್ಞಾನ: ಯಾವುದೋ ಒಂದು ಉಪಭಾಷೆಯ ಧ್ವನಿಗಳ ಆಧಾರದ ಮೇಲೆ ರಚಿತವಾದ ಹಿಂದಿನ ಧ್ವನಿ ವಿಶ್ಲೇಷಣೆ ವೈಜ್ಞಾನಿಕವೂ ಅಲ್ಲ, ಸಾಕಷ್ಟು ವಿಸ್ತಾರವಾದದೂ ಇಲ್ಲ. ಆದರೆ ಇತ್ತೀಚಿನ ಕೆಲವು ಗ್ರಂಥಗಳಲ್ಲಿ-ಕಚ್ ರು ಮತ್ತು ಹಂಡೂ-ಇವರ ಗ್ರಂಥಗಳಲ್ಲಿ ಕಾಶ್ಮೀರೀ ಧ್ವನಿಗಳ ವೈಜ್ಞಾನಿಕ ವಿಶ್ಲೇಷಣೆ ನಡೆದಿದೆ. ಕಾಶ್ಮೀರಿಯ ವ್ಯಂಜನಗಳು ಹೀಗಿವೆ.

 

ಸ್ವರ್ಶಗಳು ಪ ಫ ಬ ತ ಥ ದ ಟ ಠ ಢ ಕ ಖ ಗ

ಸ್ವರ್ಶೊಷ್ಮಗಳು ತ್ಸ ತ್ಯ ಚ ಛ ಜ

ಊಷ್ಮಗಳು ಸ ಜû ಶ ಹ

ಅನುನಾಸಿಕಗಳು ಮ ನ

ಪಾಶ್ರ್ವಿಕ ಲ

ಕಂಪಿತ ರ

ಅರ್ಧಸ್ವರಗಳು ವ ಯ

ಸ್ವರಗಳು ಇ ಉ

 ಎ ಒ

 ಓ್ರ ()

 ಇ () ಅ () ಅ (ಚಿ)

 

 ಎಲ್ಲ ಸ್ವರಗಳಿಗೂ ದೀರ್ಘ ರೂಪವಿದೆ. ಎ, ಒ ಮತ್ತು ಅ (e) ವೂ ಎಲ್ಲ ದೀರ್ಘ ಸ್ವರಗಳೂ ಅನುಸ್ವಾರ ಸಹಿತವಾಗಿಯೂ ಅನುಸ್ವಾರ ರಹಿತವಾಗಿಯೂ ಉಚ್ಚರಿಸಲ್ಪಡುತ್ತವೆ. ಚ, ಜ, ಶ ಮತ್ತು ಯ ಇವನ್ನು ಬಿಟ್ಟು ಬೇರೆ ಎಲ್ಲ ವ್ಯಂಜನಗಳೂ ತಾಲವ್ಯೀಕರಣ ಪಡೆಯುತ್ತವೆ.

 ಕಾಶ್ಮೀರೀ ಭಾಷೆಯಲ್ಲಿ ಕೆಲವು ಮಾತ್ರಾಸ್ವರಗಳೂ ಇವೆ. ಅವು ಎರಡು ವರ್ಣಗಳ ಮಧ್ಯದಲ್ಲಿರುವ ವ್ಯಂಜನ ಗುಚ್ಛದ ಮಧ್ಯದಲ್ಲಿ ಬರುತ್ತವೆ. ಅ, ಎ, ಒ ಮತ್ತು ಸಂವೃತ ಆ () ಇವುಗಳಿಗೆ ಪ್ರತಿಯಾಗಿ ಬರುವ ಈ ಮಾತ್ರಾಸ್ವರಗಳು ಅನುಕ್ರಮವಾಗಿ ಸಂವೃತ ಅ, ಎ, ಉ ಮತ್ತು ಸಂವೃತ ಅ ಹೀಗೆ ಉಚ್ಚರಿಸಲ್ಪಡುತ್ತವೆ.

 ಕಾಶ್ಮೀರಿಯ ವರ್ಣ ರಚನೆ ಈ ರೀತಿ ಇದೆ. ಒಂದು ಸ್ವರ ಮಾತ್ರ_ಆ (ಹೌದು), ವ್ಯಂಜನ ಸ್ವರ ಹು (ಅವನು), ವ್ಯಂಜನ ವ್ಯಂಜನ ಸ್ವರಟ್ರಿ (ಮೂರು), ಸ್ವರ ವ್ಯಂಜನ ಆಸ್ (ನಗು), ವ್ಯಂಜನ ಸ್ವರ ವ್ಯಂಜನ ಗೊಬ್ (ಭಾರ), ವ್ಯಂಜನ ವ್ಯಂಜನ ವ್ಯಂಜನ ಸ್ವರ ವ್ಯಂಜನ ವ್ಯಂಜನ ಟ್ರೋಂಬ್ (ಇಂಜಕ್ಷನ್ ಕೊಡು).

 ಕಾಶ್ಮೀರಿ ವರ್ಣಪ್ರಧಾನವಾದ ಭಾಷೆಯಾಗಿರುವುದರಿಂದ ಬಲಾಘಾತಕ್ಕೆ ಹೆಚ್ಚು ಮಹತ್ತ್ವವಿಲ್ಲ. ಹಿಂದಿ ಮತ್ತು ಇತರ ಆರ್ಯಭಾಷೆಗಳಂತೆ ಬಲಾಘಾತ ಭಾವೋದ್ವೇಗ ಇತ್ಯಾದಿಗಳನ್ನು ಮಾತ್ರ ಸೂಚಿಸುತ್ತದೆ.

 ಶಬ್ದ ಮತ್ತು ವಾಕ್ಯರಚನೆ: ಕಾಶ್ಮೀರಿಯ ಶಬ್ದರಚನೆಯಲ್ಲಿ ಆರ್ಯಭಾಷೆಗಳಿಂದ ಭಿನ್ನವಾದ ಕೆಲವು ಲಕ್ಷಣಗಳಿವೆ. ಸಮೀಪ ಸೂಚಕ ಮತ್ತು ದೂರ ಸೂಚಕವೆಂಬ ಎರಡು ವಿಧವಾದ ಸರ್ವನಾಮಗಳಿಗೆ ಬದಲಾಗಿ ಕಾಶ್ಮೀರೀ ಭಾಷೆಯಲ್ಲಿ ಮೂರು ವಿಧದ ಸರ್ವನಾಮಗಳಿವೆ. ಯಿ (ಇದು), ಹು (ಅದು; ಕಣ್ಣಿಗೆ ಕಾಣುವ) ಮತ್ತು ಸು (ಅದು; ಕಣ್ಣಿಗೆ ಕಾಣದ). ಇವು ವಚನ, ಲಿಂಗ ಮತ್ತು ವಿಭಕ್ತಿಗನುಸಾರವಾಗಿ ರೂಪಭೇದವನ್ನು ಹೊಂದುತ್ತವೆ.

 

ಪುಲ್ಲಿಂU

ಸ್ತ್ರೀಲಿಂU

ಏಕವಚನ

ಬಹುವಚನ

ಏಕವಚನ

ಬಹುವಚನ

ಯಿ

ಯಿಂ

ಯಿ

ಯಿಮ್

ಹು

ಹುಂ

ಹೊ

ಹುವi

ಸು/ತಿ

Wಂ

ಸೊ/ತಿ

ಘವi

 

ಕಾಶ್ಮೀರಿಯ ವಾಕ್ಯರಚನೆಯ ವಿಚಾರವಾಗಿ ಹೆಚ್ಚು ಸಂಶೋಧನೆ ನಡೆದಿಲ್ಲ. ಆದರೂ ಈ ಕೆಳಗಿನ ವೈಶಿಷ್ಟ್ಯಗಳನ್ನು ಗಮನಿಸಬಹುದು. ವಾಕ್ಯದಲ್ಲಿ ಶಬ್ದಗಳ ಅನುಕ್ರಮ ಪರ್ಶಿಯನ್ ಭಾಷೆಯಂತಿದೆ. ಕ್ರಿಯಾಪದ ಇಂಗ್ಲಿಷಿನಂತೆ ವಾಕ್ಯದ ಮಧ್ಯದಲ್ಲಿ ಬರುತ್ತದೆ. ರಾಮ್ ನೇ ಖಾನಾ ಖಾಯಾ ಎನ್ನುವ ಹಿಂದೀ ವಾಕ್ಯಕ್ಕೆ ಸಮಾನವಾದ ಕಾಶ್ಮೀರೀ ವಾಕ್ಯ ರಾಮನ್ ಖಾವ್ ಬತಿ (ರಾಮ ತಿಂದ ಆಹಾರ) ಎಂದಾಗಿದೆ. ಕರ್ಮಪದ ಕ್ರಿಯಾಪದಕ್ಕೆ ಪರವಾಗಿ ಬರುತ್ತದೆ.

 ಲಿಪಿ: ಸಾಂಪ್ರದಾಯಿಕವಾಗಿ ಕಾಶ್ಮೀರೀ ಭಾಷೆಯನ್ನು ಶಾರದಾ ಲಿಪಿಯಲ್ಲಿ ಬರೆಯುತ್ತಾರೆ. ಇದರ ಪ್ರಾಚೀನ ಸಾಹಿತ್ಯವೆಲ್ಲ ಈ ಲಿಪಿಯಲ್ಲಿಯೇ ಇದೆ. ಈ ಲಿಪಿ ಹತ್ತನೆಯ ಶತಮಾನದ ಹೊತ್ತಿಗೆ ಪ್ರಚಾರಕ್ಕೆ ಬಂತೆಂದು ಊಹಿಸಲಾಗಿದೆ. ಕ್ರಮೇಣ ಚಾರಿತ್ರಿಕ ಕಾರಣಗಳಿಂದ ಈ ಲಿಪಿಯ ಪ್ರಚಾರ ಕಡಿಮೆಯಾಗತೊಡಗಿತು. ಕಾಶ್ಮೀರೀ ಪಂಡಿತರು ಈಗಲೂ ಇದನ್ನು ಉಪಯೋಗಿಸುತ್ತಾರೆ. ಕಾಶ್ಮೀರ ಕಣಿವೆಗೆ ಶಾರದಾ ಭೂಮಿ ಎನ್ನುವ ಹೆಸರಿದ್ದುದರಿಂದ ಲಿಪಿಗೂ ಈ ಹೆಸರು ಬಂತು. ಈ ಲಿಪಿ ದೇವನಾಗರಿ ಲಿಪಿಯನ್ನು ಹೋಲುತ್ತದೆ. ಕೆಲವು ಕಾಶ್ಮೀರಿ ಹಿಂದೂಗಳು ದೇವನಾಗರಿ ಲಿಪಿಯನ್ನು ಬಳಕೆಯಲ್ಲಿಟ್ಟುಕೊಂಡಿದ್ದಾರೆ. ರೋಮನ್ ಲಿಪಿಯನ್ನು ಕೆಲವರು ಬಳಸಿದ್ದಾರೆ. ಪರ್ಸೋ-ಅರ್ಯಾಬಿಕ್ ಲಿಪಿಯೂ ಪ್ರಚಾರದಲ್ಲಿದೆ. 1947ನೆಯ ಇಸವಿಯಿಂದ ಈ ಲಿಪಿ ಕೂಡಾ ರಾಜಕೀಯ ಮಾನ್ಯತೆ ಪಡೆದಿದೆ. ಲಿಪಿ ಸುಧಾರಣೆ ಇನ್ನೂ ನಡೆಯುತ್ತಿದೆ.

 ಆಧುನಿಕ ಸಂಶೋಧನೆಗಳು: ಇತ್ತೀಚೆಗೆ 1947 ರಿಂದ ವಿದ್ವಾಂಸರು ಕಾಶ್ಮೀರಿಯ ಕಡೆಗೆ ಆಕರ್ಷಿತರಾಗಿದ್ದರೆ. ದಾರ್ದಿಕ್ ಭಾಷೆಗಳು ಭೌಗೋಳಿಕವಾಗಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಹಂಚಿಹೋಗಿರುವುದರಿಂದ ಈ ದಿಶೆಯಲ್ಲಿನ ಸಂಶೋಧನೆ ಭಾರತದಿಂದ ಹೊರಗೆ ಅಂದರೆ ರಷ್ಯ, ಅಮೆರಿಕ ಮತ್ತು ಪಾಕಿಸ್ತಾನಗಳ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಕಲೆ ಮತ್ತು ಸಂಸ್ಕøತಿ ಅಕೆಡಮಿ ಕಾಶ್ಮೀರೀ ಕೋಶಗಳ ರಚನೆಯಲ್ಲಿ ತೊಡಗಿದೆ. ಅಮೆರಿಕದ ಇಲ್ಲಿನಾಯ್ ವಿಶ್ವವಿದ್ಯಾನಿಲಯ ಕಾಶ್ಮೀರೀ ವ್ಯಾಕರಣ ಮತ್ತು ಶಿಕ್ಷಣ ಸಾಮಗ್ರಿಗಳನ್ನು ಪ್ರಕಟಿಸಿದೆ. ಭಾರತೀಯ ಭಾಷೆಗಳ ಕೇಂದ್ರಸಂಸ್ಥೆಯೂ ಕಾಶ್ಮೀರೀ ಭಾಷೆಯಲ್ಲಿ ಪ್ರಶಿಕ್ಷಣವನ್ನು ಪ್ರಾರಂಭಿಸಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಿದೆ. ವಿಶ್ವೇಶ್ವರಾನಂದ ವೈದಿಕ ಸಂಶೋಧನ ಸಂಸ್ಥೆ ಕಾಶ್ಮೀರಿಯ ಉಪಭಾಷೆಗಳ ಅಧ್ಯಯನವನ್ನು ಕೈಗೊಂಡಿದೆ.

 ಕಾಶ್ಮೀರೀ ಭಾಷೆ ಇನ್ನೂ ಹೆಚ್ಚು ಹೆಚ್ಚು ವಿದ್ವಾಂಸರ ಗಮನವನ್ನು ಸೆಳೆಯ ಬೇಕಾಗಿದೆ. ವಿದ್ಯಾಭ್ಯಾಸದ ಮಾಧ್ಯಮವಾಗಿಯೂ ಅದನ್ನು ಬಳಸಬೇಕಾಗಿದೆ. ಸರ್ಕಾರದ ಕಡೆಯಿಂದ ಈ ದಿಶೆಯಲ್ಲಿ ಹೆಚ್ಚಿನ ಪ್ರಯತ್ನ ನಡೆದಿಲ್ಲ. ರಾಜಕೀಯವಾಗಿ ಮತ್ತು ಸಾಂಸ್ಕøತಿಕವಾಗಿ ಪರಕೀಯರ ಆಡಳಿತಕ್ಕೆ ಒಳಗಾಗಿದ್ದ ಕಾಶ್ಮೀರಿಗಳು ತಮ್ಮ ಭಾಷೆಯ ಉನ್ನತಿಗಾಗಿ ಪ್ರಯತ್ನಿಸಲಿಲ್ಲ. ಹೀಗಾಗಿ ಸರ್ಕಾರ ಹಾಗೂ ಶೈಕ್ಷಣಿಕ ಸಂಸ್ಥೆಗಳು ಕೂಡ ಈ ಭಾಷೆಯನ್ನು ಅಧ್ಯಯನ ಯೋಗ್ಯವೆಂದು ಪರಿಗಣಿಸಲಿಲ್ಲ.

 

(ಜೆ.ಎಚ್.)